

ಸೇಡಂ: ಒಳ ಮೀಸಲಾತಿ ಜಾರಿ ಕುರಿತು ಮುಖ್ಯಮಂತ್ರಿಗಳ ಮನವೊಲಿಸಿ, ಸಂಪುಟ ಸಭೆಯಲ್ಲಿ ಚರ್ಚೆ ನಡೆಸಬೇಕು ಎಂದು ಮಾದಿಗ ಸಮಾಜದ ಪದಾಧಿಕಾರಿಗಳು ಒತ್ತಾಯಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರಿಗೆ ಮನವಿಪತ್ರ ಸಲ್ಲಿಸಿದ ಪದಾಧಿಕಾರಿಗಳು, ಸರ್ವೋಚ್ಚ ನ್ಯಾಯಾಲಯದ ತೀರ್ಪಿನಂತೆ ಈಗಾಗಲೇ ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಒಳಮೀಸಲಾತಿ ಅನುಷ್ಠಾನಗೊಳಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಜಾರಿಗೆ ಹಿಂದೇಟು ಹಾಕಲಾಗುತ್ತಿದೆ. ಹೀಗಾಗಿ ಸೋಮವಾರ ನಡೆಯಲಿರುವ ಸಚಿವ ಸಂಪುಟದ ಸಭೆಯಲ್ಲಿ ಒಳ ಮೀಸಲಾತಿ ಅನುಷ್ಠಾನಗೊಳಿಸುವಂತೆ ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.
ದಲಿತ ಸಮಾಜದ ತಾಲೂಕು ಅಧ್ಯಕ್ಷ ಮಾರುತಿ ಕೊಡಂಗಲಕರ್, ಗೌರವಾಧ್ಯಕ್ಷ ಶಂಭುಲಿAಗ ನಾಟೀಕಾರ, ನಗರಾಧ್ಯಕ್ಷ ಸಂತೋಷ ಇಂಜಳ್ಳಿ, ನಗರ ಗೌರವಾಧ್ಯಕ್ಷ ದತ್ತು ಮುಗಟಿ, ತಾಲೂಕು ಉಪಾಧ್ಯಕ್ಷರಾದ ದಿನೇಶ ಮಂಗಾ, ಸದಾನಂದ ಮುಕಡಿ, ಪ್ರಮುಖರಾದ ಬಸವರಾಜ ಮಳಗಿ, ಜಗನ್ನಾಥ ಚಿಂತಪಳ್ಳಿ, ಶ್ರೀಶೈಲ್ ಎಂಜಿ, ಬಸಣ್ಣ ರನ್ನೇಟ್ಲಾ, ಸಾಬಣ್ಣ ಹೊಸಳ್ಳಿ, ಈಶ್ವರ ಹಳ್ಳಿ, ರಾಜು ಕಾಳಗಿ, ಮಸ್ತಾನಪ್ಪ ಸೂಗೂರ, ಮಾರುತಿ ಮುಗಟಿ, ಬಸವರಾಜ ಕಾಳಗಿ, ಶಾಂತಪ್ಪ ಕೋಲಕುಂದಾ, ದೇವೀಂದ್ರ ಮಳಗಿ, ಭೀಮರಾವ ಮೇತ್ರಿ, ಮಾರುತಿ ಯಡ್ಡಳ್ಳಿಕರ್, ಗಣೇಶ ಕಟ್ಟಿಮನಿ, ಶರಣಪ್ಪ ಕಣೇಕಲ್, ಅಶೋಕ ಫಿರಂಗಿ, ವೆಂಕಟಪ್ಪ ಮೋತಕಪಲ್ಲಿ, ಶೇಖರ ನಾಟೀಕಾರ ಇತರರಿದ್ದರು.