ಒಳ ಉಡುಪಿನಲ್ಲಿ 39.48 ಲಕ್ಷ ರೂ. ಮೌಲ್ಯದ ಚಿನ್ನ ಸಾಗಾಟ ದಂಪತಿ ಬಂಧನ

Published on



ಮಂಗಳೂರು: ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಅಕ್ರಮ ಸಾಗಾಟ ಮಾಡುತ್ತಿದ್ದ ದಂಪತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. 39.48 ಲಕ್ಷ ರೂ. ಮೌಲ್ಯದ 851 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಕೇರಳದ ಕಾಸರಗೋಡಿನ ಚೆರೂರ್ ಮೂಲದವರಾದ  ಫೌಸಿಯಾ ಮಿಸ್ಸಿರಿಯಾ  ಅವರು ತನ್ನ ಪತಿ ಮೊಯ್ದೀನ್ ಕುಂಞಿ ಚೆರೂರ್ ಹಾಗೂ 4 ಮಕ್ಕಳೊಂದಿಗೆ ದುಬೈನಿಂದ ಬರುತ್ತಿರುವ ಏರ್ ಇಂಡಿಯಾ ವಿಮಾನದಿಂದ ಇಳಿದಿದ್ದು, ಅಲ್ಲಿಂದ ಮಹಿಳೆಯು ವಿಶೇಷವಾಗಿ ವಿನ್ಯಾಸಗೊಳಿಸಿದ ಒಳ ಉಡುಪಿನಲ್ಲಿ ಮರೆಮಾಚುವ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net