ಒಲವು ತೋರಿದರೆ ದೇಶ ಸೇವೆಗೆ ಕಟಿಬದ್ಧ

23sunti02
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಎಸ್.ಪ್ರವೀಣ್ ಮತಯಾಚನೆ ಮಾಡಿದರು.
Published on

ಸುಂಟಿಕೊಪ್ಪ: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮಾತ್ರ ಗುರುತಿಸದೇ ಪ್ರಾದೇಶಿಕ ಕೆ.ಆರ್. ಪಕ್ಷದ ಕಡೆಗೂ ಒಲವು ತೋರಿಸಿದರೆ ಜನ ಸೇವೆ, ದೇಶ ಸೇವೆಗೂ ನಾವು ಕಟ್ಟಿಬದ್ಧರಾಗಿ ಸಿದ್ಧರಿದ್ದೇವೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕೊಡಗು- ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಎಸ್.ಪ್ರವೀಣ್ ಹೇಳಿದರು.

ಸುಂಟಿಕೊಪ್ಪ ಕನ್ನಡ ವೃತ್ತದಲ್ಲಿ ಸೋಮವಾರ ಸಂಜೆ ಮತಯಾಚನೆ ಮಾಡಿ ಮಾತನಾಡಿ, ನಮ್ಮ ಪಕ್ಷ ಕಳೆದ ಹಲವು ವರ್ಷಗಳಿಂದಲೂ ಜನ ಪರವಾದ ಸೇವೆಗಳು ಸೂಕ್ತ ರೀತಿಯಲ್ಲಿ ದೊರಯಬೇಕೆಂದು ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದೆ. ಬಡವರ ಸೇವೆ, ಜನಪರ ಕಾಳಜಿಯೊಂದಿಗೆ ನಿರಂತರವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಬಡವರ ಪರವಾಗಿ ನಿಂತಿದ್ದೇವೆ. ಭ್ರಷ್ಟಾಚಾರದಿಂದ ಕೂಡಿರುವ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ತೊಡೆದು ಹಾಕಿ ಪ್ರಾದೇಶಿಕ ಪಕ್ಷವಾದ ಕೆಆರ್‌ಎಸ್ ಪಕ್ಷವನ್ನು ಗೆಲ್ಲಿಸಿ ಅರ್ಹ, ಯೋಗ್ಯ ಅಭ್ಯರ್ಥಿಯನ್ನು ನಿಮ್ಮ ಸೇವೆಗೆ ಕಳುಹಿಸಿಕೊಡುವಂತೆ ಮನವಿ ಮಾಡಿದರು.

ಎಲೆಕ್ಟ್ರಾನಿಕ್ ಮಾಧ್ಯಮ ಕೂಡ ಕೇವಲ ಕಾಂಗ್ರೆಸ್, ಬಿಜೆಪಿ ಬಗ್ಗೆ ಮಾತ್ರ ಪ್ರಚಾರ ಮಾಡಿ ಭ್ರಷ್ಟರ ಪರ ನಿಂತಿರುವುದು ಸರಿಯಲ್ಲ. ನಾವು ಕೂಡ ಯೋಗ್ಯ, ವಿದ್ಯಾವಂತ ಅಭ್ಯರ್ಥಿಗಳು. ಹಾಗಾಗಿ ನಿಮ್ಮ ಅಮೂಲ್ಯವಾದ ಮತ ನೀಡಿ ಗೆಲ್ಲಿಸುವಂತೆ ಮತದಾರರಲ್ಲಿ ಮತಯಾಚಿಸಿದರು.
ನಂತರ ಪಟ್ಟಣದ ಅಂಗಡಿ, ಮನೆ ಮನೆಗೆ ತೆರಳಿ ಭಿತ್ತಿಪತ್ರ ನೀಡಿ ಮತಯಾಚಿಸಿದರು. ಪಕ್ಷದ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net