ಒರಾಂಗೂಟಾನ್ ಪ್ರಾಣಿಗೆ ನೂತನ ಕೊಠಡಿ ಉದ್ಘಾಟನೆ

8
Published on

ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ನೂತವಾಗಿ ನಿರ್ಮಿಸಿರುವ 2ನೇ ಹಂತದ ಒರಾಂಗೂಟಾನ್ ಪ್ರಾಣಿ ಕೊಠಡಿಯನ್ನು ಶುಕ್ರವಾರ ಉದ್ಘಾಟಿಸಲಾಯಿತು.
ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ತನ್ನ ಸಿಎಸ್‌ಆರ್ ನಿಧಿ ಅಡಿ ನೀಡಿದ ಹಣಕಾಸು ಸಹಾಯದಿಂದ ನವೀನವಾಗಿ ನಿರ್ಮಿಸಿರುವ ಕೊಠಡಿಯನ್ನು ಮುದ್ರಣ ಘಟಕದ ವ್ಯವಸ್ಥಾಪಕ ನಿರ್ದೇಶಕ ಎಸ್. ತಲೀಕೇರಪ್ಪ ಉದ್ಘಾಟಿಸಿದರು.
ಸುಮಾರು 99.20 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಈ ಪ್ರಾಣಿ ಮನೆಯು ಅಳಿವಿನಂಚಿನಲ್ಲಿರುವ ಒರಾಂಗೂಟಾನ್‌ನಂತಹ ದೊಡ್ಡವಾನರ ಪ್ರಾಣಿಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ. ಮಹೇಶ್‌ಕುಮಾರ್ ತಿಳಿಸಿದರು.
ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ. ರವಿ, ಸಂಸ್ಥೆಯ ಹಿರಿಯ ಪ್ರಧಾನ ವ್ಯವಸ್ಥಾಪಕ ಕೆ. ಧರಣಿಕುಮಾರ್, ಹಿರಿಯ ಪ್ರಧಾನ ವ್ಯವಸ್ಥಾಪಕರಾದ ಅನಂತ ಹೆಗ್ಡೆ, ಅಭಯ್‌ಕುಮಾರ್ ಮಹಾಪಾತ್ರೊ, ಕಂಪನಿ ಕಾರ್ಯದರ್ಶಿ ಲಕ್ಷ್ಮೀಶಬಾಬು, ವ್ಯವಸ್ಥಾಪಕ ಎಸ್.ಎ. ರಾಘವೇಂದ್ರ, ಉಪ ನಿರ್ದೇಶಕಿ ಎ.ಜೆ. ರೋಷಿಣಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net