

ಚಿತ್ರದುರ್ಗ: ಜಿಲ್ಲಾ ಬೇಡಜಂಗಮ ಸಮಾಜ ಸಂಸ್ಥೆಯಿಂದ ಸೋಮವಾರ ರಾಜ್ಯಮಟ್ಟದ ಬೇಡಜಂಗಮರ ಸಂಘಟನೆ, ಕಾನೂನಾತ್ಮಕ ಹೋರಾಟ, ಸರ್ಕಾರಿ ಸೌಲಭ್ಯ, ಮಕ್ಕಳಿಗೆ ಧಾರ್ಮಿಕ ಸಂಸ್ಕಾರ ನೀಡುವ ವಿಚಾರವಾಗಿ ನಡೆದ ಸಭೆಯಲ್ಲಿ ಒಬ್ಬರೇ ಗುರು ಒಂದೇ ಸಂಘಟನೆ ಎಂಬ ತತ್ವ-ಸಿದ್ಧಾಂತಕ್ಕೆ ಬದ್ಧರಾಗಿರೋಣ ಎಂಬ ತೀರ್ಮಾನ ಕೈಗೊಳ್ಳಲಾಯಿತು.
ಸಮಾಜ ಸಂಘಟನಾತ್ಮಕವಾಗಿ ಬಲಗೊಳ್ಳಬೇಕು. ಎಲ್ಲ ಆಶೋತ್ತರ ಈಡೇರಿಕೆಗಾಗಿ ಒಬ್ಬ ಸ್ವಾಮೀಜಿ ನೇಮಕ ಮಾಡಿ, ಮಠ ನಿರ್ಮಾಣಕ್ಕೂ ಮುಂದಾಗಬೇಕು ಎಂಬ ಅಭಿಪ್ರಾಯ ಕೇಳಿಬಂದವು.
ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ವಿಜಯನಗರ, ಬೆಂಗಳೂರು, ಕಲಬುರಗಿ ಸೇರಿ ವಿವಿಧೆಡೆಯ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಸಭೆಯಲ್ಲಿ ಇಳಕಲ್‌ನ ವೀರೇಶ್ ಕೂಡ್ಲಿಮಠ ಮಾತನಾಡಿದರು. ಮುಖಂಡರಾದ ಎಂ.ಟಿ.ಮಲ್ಲಿಕಾರ್ಜುನಸ್ವಾಮಿ, ಕೆ.ಎಂ.ವೀರೇಶ್, ಸೋಮಶೇಖರ್ ಮಂಡೀಮಠ, ಷಡಾಕ್ಷರಯ್ಯ, ಕಲ್ಲೇಶಯ್ಯ, ಮೃತ್ಯುಂಜಯಸ್ವಾಮಿ, ಆರ್.ಜಿ.ರಾಜಶೇಖರ್, ಕೆ.ಆರ್.ಸೋಮನಾಥಯ್ಯ, ಪ್ರದೀಪ್ ಆರಾಧ್ಯ, ತಿಪ್ಪೇಸ್ವಾಮಿ ಇತರರಿದ್ದರು.