ಒಬಿಸಿ ಮೀಸಲಾತಿ ಹೋರಾಟ ಆರಂಭಿಸೋಣ

OBC Reservation Struggle Let's Start Jagadguru Basavajaya Mrityunjaya Swamiji Call Mudalagi Belgaum
ಕಲ್ಲೋಳಿಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಬಸವಜಯ ಮೃತ್ಯುಂಜಯ ಸ್ವಾಮೀಜಿ ಉದ್ಘಾಟಿಸಿದರು. ನಿಂಗಪ್ಪ ಫಿರೋಜಿ, ಬಸವರಾಜ ಕಡಾಡಿ, ರಾವಸಾಹೇಬ ಬೆಳಕೂಡ ಇದ್ದರು.
Published on

ಮೂಡಲಗಿ: ನಿರಂತರ ಹೋರಾಟದ ಫಲದಿಂದ ಲಿಂಗಾಯತ ಪಂಚಮಸಾಲಿ ಸಮುದಾಯ 2ಡಿ ಮೀಸಲಾತಿ ಪಡೆದುಕೊಂಡಿದ್ದು, ಚುನಾವಣೆ ನಂತರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ 2024ರ ಒಳಗಾಗಿ ಲಿಂಗಾಯತ ಎಲ್ಲ ಒಳಪಂಗಡಗಳಿಗೆ ಒಬಿಸಿ ಮೀಸಲಾತಿ ಪಡೆಯಲು ಒಗ್ಗಟಿನಿಂದ ಹೋರಾಟ ಮಾಡೋಣ ಎಂದು ಕೂಡಲಸಂಗಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಕರೆ ನೀಡಿದರು.

ತಾಲೂಕಿನ ಕಲ್ಲೋಳಿ ಪಟ್ಟಣದ ಬಲಭೀಮ ರಂಗ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ಸಿಕ್ಕಿರುವ ಹಿನ್ನೆಲೆಯಲ್ಲಿ ವಿಜಯೋತ್ಸವ ಹಾಗೂ ನಿರಂತರ ಹೋರಾಟ ಮಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಯುವಕರ ಉದ್ಯೋಗಕ್ಕಾಗಿ ಸರ್ಕಾರ 2ಡಿ ಮೀಸಲಾತಿ ನೀಡಿರುವುದು ಹರ್ಷ ತಂದಿದೆ. ವಿಧಾನಸಭೆ ಚುನಾವಣೆ ಮುಗಿದ ತಕ್ಷಣ ಲಿಂಗಾಯತ ಎಲ್ಲ ಒಳಪಂಗಡಗಳಿಗೆ ಒಬಿಸಿ ಮೀಸಲಾತಿ ಪಡೆದುಕೊಳ್ಳೋಣ ಎಂದರು. ಪಂಚಮಸಾಲಿ ಸಮುದಾಯದ ಜಿಲ್ಲಾಧ್ಯಕ್ಷ ನಿಂಗಪ್ಪ ಫಿರೋಜಿ, ಬಸವರಾಜ ಕಡಾಡಿ, ರಾವಸಾಹೇಬ ಬೆಳಕೂಡ, ಸೈನಿಕರ ಸಂಘದ ಅಧ್ಯಕ್ಷ ಬಾಳೇಶ ಶಿವಾಪುರ, ಮಲ್ಲಪ್ಪ ಗೊಡಿಗೌಡರ, ದೀಪಕ ಜುಂಜರವಾಡ, ಸಂಗಮೇಶ ಕೌಜಲಗಿ, ಶಂಕರ ಬೆಳಕೂಡ, ಕಲ್ಲಪ್ಪ ಕಡಾಡಿ, ಪ್ರಭು ಕಡಾಡಿ, ಗಿರಮಲ್ಲಪ್ಪ ಸೌಸುದ್ದಿ, ಬಾಳಪ್ಪ ಕಂಕಣವಾಡಿ, ಹನುಮಂತ ಸಂಗಟಿ, ಸಿದ್ದಪ್ಪ ಮುಗಳಿ, ಶಿವಾನಂದ ಹೆಬ್ಬಾಳ, ಹನುಮಂತ ಖಾನಗೌಡ್ರ, ಶಿವಪ್ಪ ಪಾಟೀಲ, ಪರಗೌಡ ಪಾಟೀಲ, ರಮೇಶ ಕಡಲಗಿ, ಮಲ್ಲಪ್ಪ ಕುರಬೇಟ, ಅಜಿತ ಬೆಳಕೂಡ, ಕೃಷ್ಣಪ್ಪ ಮುಂಡಿಗನಾಳ, ಬಸಗೊಂಡ ಪರಕನಟ್ಟಿ, ಅಡಿವೆಪ್ಪ ಕುರಬೇಟ, ಪಂಚಣ್ಣ ಹೆಬ್ಬಾಳ, ಆನಂದ ಚಿಕ್ಕೋಡಿ, ಹನುಮಂತ ಕೌಜಲಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net