ಒಪಿಎಸ್ ಮರು ಜಾರಿಗೆ ಸಿಎಂಗೆ ಪತ್ರ ಚಳವಳಿ

kls post
ಕಳಸ ತಾಲೂಕಿನ ಸರ್ಕಾರಿ ನೌಕರರರು ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಪ್ರದರ್ಶಿಸಿದರು. ವಿನಯಕುಮಾರ್ ಶೆಟ್ಟಿ, ಪುನೀತ್‌ಕುಮಾರ್, ಟಿ.ಎಂ.ದಿನೇಶ್, ಮಲ್ಲಿಕಾರ್ಜುನ್, ಸೋಮಶೇಖರ್ ಇತರರಿದ್ದರು.
Published on

ಕಳಸ: ತಾಲೂಕಿನ ವಿವಿಧ ಇಲಾಖೆಗಳ ಸರ್ಕಾರಿ ನೌಕರರರು ಹಳೆಯ ನಿಶ್ಚಿತ ಪಿಂಚಣಿ ಯೋಜನೆಯ ಮರು ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂಚೆ ಕಚೇರಿ ಮೂಲಕ ಮನವಿ ಸಲ್ಲಿಸಿದರು.

ಫೆ.7ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಹಕ್ಕೊತ್ತಾಯ ಸಭೆಗೆ ಮುನ್ನ ಪತ್ರ ಅಭಿಯಾನ ಆರಂಭಿಸಿರುವ ರಾಜ್ಯ ಸರ್ಕಾರಿ ನೌಕರರರು, ಮುಖ್ಯಮಂತ್ರಿಗೆ ಬರೆದ ಪತ್ರವನ್ನು ಕಳಸ ಅಂಚೆ ಕಚೇರಿ ಡಬ್ಬಿಗೆ ಹಾಕಿದರು. ಚುನಾವಣಾಪೂರ್ವ ಪ್ರಣಾಳಿಕೆಯಲ್ಲಿ ನೀಡಿದ 6ನೇ ಭರವಸೆಯಂತೆ 2006 ಜೂ.1ಕ್ಕಿಂತ ಮುಂಚಿತವಾಗಿ ಇದ್ದ ಹಳೇ ಪಿಂಚಣಿಯನ್ನು ಮರು ಜಾರಿ ಮಾಡುವ ಮೂಲಕ ನಮ್ಮ ನಿವೃತಿ ನಂತರ ನನಗೆ ಮತ್ತು ನನ್ನ ಕುಟುಂಬಕ್ಕೆ ಭದ್ರತೆ ಒದಗಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಸರ್ಕಾರಿ ನೌಕರರಾದ ವಿನಯಕುಮಾರ್ ಶೆಟ್ಟಿ, ಮಧುಸೂದನ್, ವಿಶುಕುಮಾರ್, ಪುನೀತ್‌ಕುಮಾರ್, ಟಿ.ಎಂ.ದಿನೇಶ್, ಮಲ್ಲಿಕಾರ್ಜುನ್, ಶೇಖರಪ್ಪ, ಸೋಮಶೇಖರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net