ಒನಕೆ ಓಬವ್ವ ಸ್ತ್ರೀ ಕುಲಕ್ಕೆ ಸ್ಪೂರ್ತಿ

11blrp1
ವೀರ ವನಿತೆ ಒನಕೆ ಓಬವ್ವ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕ ಮಹಿಳೆಯರನ್ನು ಅಭಿನಂದಿಸಲಾಯಿತು.
Published on

ಬೇಲೂರು: ಕೋಟೆಗೆ ನುಗ್ಗಿದ ಹೈದರಾಲಿ ಸೈನ್ಯವನ್ನು ತನ್ನ ಪರಾಕ್ರಮದಿಂದಲೇ ಏಕಾಂಗಿಯಾಗಿ ಸದೆ ಬಡಿದ ವೀರ ವನಿತೆ ಓಬವ್ವ ಸ್ತ್ರೀ ಕುಲಕ್ಕೆ ಸ್ಪೂರ್ತಿಯಾಗಿದ್ದು, ಅವರ ಆದರ್ಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣ ಸೋಮವಾರ ಆಯೋಜಿಸಿದ್ದ ವೀರ ವನಿತೆ ಒನಕೆ ಓಬವ್ವ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಚಲವಾದಿ ಸಮುದಾಯಕ್ಕೆ ಸೇರಿದ ವೀರ ವನಿತೆ ಓಬವ್ವ ಸ್ತ್ರೀ ಕುಲಕ್ಕೆ ಮಾದರಿಯಾಗಿದ್ದು, ಅವರ ಪುತ್ಥಳಿಯನ್ನು ಬೇಲೂರಿನಲ್ಲಿ ಸ್ಥಾಪಿಸಲು ಬದ್ಧವಾಗಿದ್ದೇನೆ. ಅಲ್ಲದೆ ಈಗ ಹೆಸರಿಡಲು ಸದ್ಯಕ್ಕೆ ಯಾವುದೇ ರಸ್ತೆ, ವೃತ್ತವಿಲ್ಲ. ಹೋಳೆಬೀದಿ ರಸ್ತೆ ಅಭಿವೃದ್ಧಿ ಬಳಿಕ ಕನಕದಾಸರ ಹೆಸರನ್ನಿಡಲಾಗುವುದು ಮತ್ತುಅಂಬೇಡ್ಕರ್ ಭವನದ ಮುಂದೆ ಓಬವ್ವ ಅವರ ಪುತ್ಥಳಿ ಸ್ಥಾಪನೆಗೆ ಸಮಾಜದ ಮುಖಂಡರು ತೆಗೆದುಕೊಳ್ಳುವ ನಿರ್ಣಯದ ಮೇಲೆ ನಿಂತಿದೆ. ತಾಲೂಕಿನಲ್ಲಿ ಪರಿಶಿಷ್ಟ ಜಾತಿ, ಪಂಗಡದವರು ಹೆಚ್ಚಾಗಿದ್ದು, ಸರ್ಕಾರದ ಸವಲತ್ತುಗಳ ಜತೆಗೆ ಚಲವಾದಿ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಸದನದಲ್ಲಿ ದನಿ ಎತ್ತುವುದಾಗಿದೆ ಭರವಸೆ ನೀಡಿದರು.

ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ಕರ್ನಾಟಕ ವೀರ ವನಿತೆಯನ್ನು ಕಂಡ ಪುಣ್ಯಭೂಮಿ, ಕುಟುಂಬದ ನಿರ್ವಹಣೆ ಜತೆಗೆ ರಾಜ್ಯಗಳನ್ನು ಸಂರಕ್ಷಿಸುವ ಮಹತ್ವಪೂರ್ಣ ಕೆಲಸವನ್ನು ದಿಟ್ಟತನದಿಂದ ಮಹಿಳೆ ನಿರ್ವಹಿಸಿದ್ದಾರೆ ಎಂಬುದಕ್ಕೆ ರಾಣಿ ಅಬ್ಬಕ್ಕ , ಕೆಳದಿ ಚೆನ್ನಮ್ಮ, ಕಿತ್ತೂರು ರಾಣಿ ಚೆನ್ನಮ್ಮ ಇಂತಹ ವೀರ ಮಹಿಳೆಯರ ಸಾಲಿನಲ್ಲಿ ವೀರ ವನಿತೆ ಒನಕೆ ಓಬವ್ವ ಸೇರುತ್ತಾರೆ ಎಂದರು.

ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್, ರಾಷ್ಟ್ರೀಯ ತೆಂಗು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ರೇಣುಕುಮಾರ್, ಬಿಇಒ ರಾಜೇಗೌಡ, ಕಸಾಪ ಅಧ್ಯಕ್ಷ ಮಂಜೇಗೌಡ, ಜಿಪಂ ಮಾಜಿ ಅಧ್ಯಕ್ಷೆ ಕಾಮಾಕ್ಷಿ ರಾಜು, ಜಿ.ಟಿ.ಇಂದಿರಾ, ಮಾಜಿ ಸದಸ್ಯೆ ಲತಾಮಂಜೇಶ್ವರಿ, ತಾಪಂ ಮಾಜಿ ಅಧ್ಯಕ್ಷ ಪರ್ವತಯ್ಯ, ಮಾಜಿ ಸದಸ್ಯೆ ಕಮಲಮ್ಮ, ಚಲವಾದಿ ಮಹಾಸಭಾ ಅಧ್ಯಕ್ಷ ಮಂಜುನಾಥ್, ಛಲವಾದಿ ಸಂಘದ ಅಧ್ಯಕ್ಷ ರಮೇಶ್, ಮುಖಂಡರಾದ ಎಂ.ಜೆ.ವೆಂಕಟೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net