ಒತ್ತುವರಿ ಭೂಮಿ ಸರ್ಕಾರಕ್ಕೆ ವಶಪಡಿಸಿಕೊಳ್ಳಲು ಒತ್ತಾಯಿಸಿ ಮನವಿ

7 ckm 6
ಚಿಕ್ಕಮಗಳೂರು ಎಡಿಸಿ ನಾರಾಯಣರಡ್ಡಿ ಕನಕರಡ್ಡಿ ಅವರಿಗೆ ಮನವಿ ಸಲ್ಲಿಸಿದ ತೇಗೂರು ಗ್ರಾಮಸ್ಥರು ಅರಳಗುಪ್ಪೆ ಗ್ರಾಮದ ಸರ್ವೆ ನಂ. ೧೬ರಲ್ಲಿರುವ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿದ್ದು, ಕಂದಾಯ ಇಲಾಖೆಗೆ ಸೇರಿದ ಈ ಜಾಗವನ್ನು ಸರ್ಕಾರಕ್ಕೆ ವಶಪಡಿಸಿಕೊಳ್ಳುವಂತೆ ಆಗ್ರಹಿಸಿದರು. ಸಿ.ಎನ್.ದೇವರಾಜ್ ಅರಸ್, ಜಯದೇವರಾಜ್ ಅರಸ್, ರಂಗನಾಥ್, ದೀಪು, ಪುನೀತ, ಮಂಜುನಾಥ ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ತಾಲೂಕು ಕಸಬಾ ಹೋಬಳಿ ಅರಳಗುಪ್ಪೆ ಗ್ರಾಮದ ಸರ್ವೆ ನಂ. ೧೬ರಲ್ಲಿರುವ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಯೊಬ್ಬರು ಒತ್ತುವರಿ ಮಾಡಿದ್ದು, ಕಂದಾಯ ಇಲಾಖೆಗೆ ಸೇರಿದ ಈ ಜಾಗವನ್ನು ಸರ್ಕಾರಕ್ಕೆ ವಶಪಡಿಸಿಕೊಳ್ಳುವಂತೆ ಆಗ್ರಹಿಸಿ ಅಪರ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಅವರಿಗೆ ತೇಗೂರಿನ ಮಾಹಿತಿ ಹಕ್ಕು ಹೋರಾಟಗಾರ ಸಿ.ಎನ್.ದೇವರಾಜ್ ಅರಸ್ ನೇತೃತ್ವದಲ್ಲಿ ಸ್ಥಳೀಯರು ಮನವಿ ಸಲ್ಲಿಸಿದರು.

ಸಿರಿ ನೇಚರ್ ರೋಸ್ಟ್ ಮಾಲೀಕ ಎಸ್.ಎನ್.ರಮೇಶ್ ಎಂಬುವವರು ಸರ್ವೆ ನಂ ೧೬/೧ಬಿ ಯಲ್ಲಿ ೩ ಎಕರೆ ೧೦ ಗುಂಟೆ ಜಾಗ ಇದ್ದು, ೨ ಎಕರೆ ೨೭ ಗುಂಟೆ ಜಾಗಕ್ಕೆ ಬೇಲಿಯನ್ನು ನಿರ್ಮಿಸಿಕೊಂಡಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.

ಈ ಮೇಲಿನ ಸರ್ಕಾರಿ ಜಾಗವನ್ನು ಸರ್ಕಾರಕ್ಕೆ ವಶಪಡಿಸಿಕೊಳ್ಳುವಂತೆ ಒತ್ತಾಯಿಸಿ ದಿನಾಂಕ ೨೦೨೩ರ ನ. ೨೩ರಂದು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದ್ದು, ಅದರಂತೆ ೨೦೨೩ರ ನ. ೨೪ರಂದು ತಾಲೂಕು ಕಚೇರಿಯ ಕಂದಾಯ ಅಧಿಕಾರಿಗಳು, ಸರ್ವೆ ಇಲಾಖೆಯ ಅಧಿಕಾರಿಗಳು ಜಂಟಿ ಸ್ಥಳ ಪರಿಶೀಲನೆ ಮಾಡಿ ಒತ್ತುವರಿ ಮಾಡಿರುವ ಜಾಗದ ಬಗ್ಗೆ ವರದಿ, ನಕ್ಷೆಯನ್ನು ತಯಾರಿಸಿ ತಹಸೀಲ್ದಾರ್‌ಗೆ ಸಲ್ಲಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ವ್ಯಕ್ತಿಗೆ ನಮೂನೆ ೪೭ರ ಪ್ರಕಾರ ಹೊರದೂಡುವ ಅಂತಿಮ ನೋಟೀಸನ್ನು ಇದೇ ಅ. ೩ರಂದು ತಾಲೂಕು ಕಚೇರಿಯಿಂದ ನೀಡಿದ್ದು, ಸದರಿ ಜಾಗವನ್ನು ತೆರವು ಮಾಡದೆ ತೊಂದರೆ ಕೊಡುತ್ತಿದ್ದಾರೆ. ನಗರಸಭೆ ವ್ಯಾಪ್ತಿಯಿಂದ ೫ ಕಿ.ಮೀ ವ್ಯಾಪ್ತಿಗೆ ಬರುವ ಅಲ್ಲಂಪುರ ಗ್ರಾಪಂಗೆ ಒಳಪಟ್ಟಿದ್ದು, ಇದರ ಇಂದಿನ ಮಾರುಕಟ್ಟೆ ಬೆಲೆ ಸುಮಾರು ೧೨ ಕೋಟಿ ರೂ.ಗೂ ಹೆಚ್ಚಿದೆ. ಕೂಡಲೇ ಈ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಭೂಕಂದಾಯ ಕಾಯಿದೆ ಸಂಪೂರ್ಣ ಉಲ್ಲಂಘನೆಯಾಗಿರುವುದರಿAದ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗಿರುವ ಖಾತೆಯನ್ನು ರದ್ದು ಮಾಡಲು ತಹಸೀಲ್ದಾರ್‌ಗೆ ಲಿಖಿತ ರೂಪದಲ್ಲಿ ಆದೇಶಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಯದೇವರಾಜ್ ಅರಸ್, ರಂಗನಾಥ್, ದೀಪು, ಪುನೀತ, ಮಂಜುನಾಥ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net