ಒತ್ತುವರಿ ತೆರವುಗೊಳಿಸಿ ನಿವೇಶನ ನೀಡಿ

D.18-MDG-1P1.jpg web
Published on

ಮೂಡಿಗೆರೆ: ಚಿನ್ನಿಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಯ್ಸಳಲು ಗ್ರಾಮಸ್ಥರಿಗೆ ನಿವೇಶನ, ಸಮುದಾಯ ಭವನ ನಿರ್ಮಾಣ ಹಾಗೂ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡುವಂತೆ ಡಾ. ಬಿ.ಆರ್.ಅಂಬೇಡ್ಕರ್ ಸೇವಾ ಸಮಿತಿ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್ ನಾಗರಾಜ್ ಅವರಿಗೆ ಮನವಿ ಸಲ್ಲಿಸಿದರು.
ಸಮಿತಿ ಅಧ್ಯಕ್ಷ ಎಚ್.ಎಸ್.ನಾಗರಾಜ್ ಮಾತನಾಡಿ, ನಿವೇಶನ ನೀಡುವಂತೆ ಚಿನ್ನಿಗಾ ಗ್ರಾಪಂಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಸ್ಮಶಾನ ಭೂಮಿಯಿಲ್ಲದೆ ಶವಸಂಸ್ಕಾರ ನಡೆಸುವುದೇ ದೊಡ್ಡ ಗೋಳಾಗಿದೆ. ಸಮುದಾಯ ಭವನ ನಿರ್ವಣಕ್ಕೆ ಸರ್ಕಾರದಿಂದ ಎರಡು ಬಾರಿ ಅನುದಾನ ಮಂಜೂರಾಗಿದ್ದರೂ ಜಾಗವಿಲ್ಲದ ಕಾರಣ ಅನುದಾನ ಮರಳಿ ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗ್ರಾಮದ ಸರ್ವೆ ನಂ.54ರಲ್ಲಿ 2.30 ಎಕರೆ ಸರ್ಕಾರಿ ಗೋಮಾಳವಿದ್ದು ಉಳ್ಳವರು ಕಬಳಿಸಿದ್ದಾರೆ. ಅವರಿಂದ ಜಾಗವನ್ನು ತೆರವುಗೊಳಿಸಿ ಗ್ರಾಮಸ್ಥರಿಗೆ ನಿವೇಶನ, ಸ್ಮಶಾನ ಹಾಗೂ ಸಮುದಾಯ ಭವನಕ್ಕೆ ಜಾಗ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net