

ಎಸ್.ಬಸವರಾಜಪ್ಪ ಅವರು ಹಳ್ಳವನ್ನು ಮುಚ್ಚಿ ಬೇಲಿ ಹಾಕಿಕೊಂಡಿದ್ದಾರೆ. ಈ ಬಗ್ಗೆ ಕಡೂರು ತಹಸೀಲ್ದಾರರಿಗೆ ದೂರು ನೀಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬಿ.ಎಸ್. ಸೋಮಶೇಖರಪ್ಪ ಅವರು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯವು ಕಳೆದ ಜನವರಿ ೨೨ ರಂದೇ ಆದೇಶ ನೀಡಿ ಒತ್ತುವರಿ ತೆರವುಗೊಳಿಸಿ ಮುಂದೆಂದು ಒತ್ತುವರಿ ಮಾಡದಂತೆ ಮುಚ್ಚಳಿಕೆ ಪತ್ರವನ್ನು ಬರೆಸಿಕೊಳ್ಳಬೇಕೆಂದು ಆದೇಶಿಸಿ, ಆದೇಶ ತಲುಪಿದ ೬ ವಾರಗಳೊಳಗೆ ಒತ್ತುವರಿಯನ್ನು ತೆರವುಗೊಳಿಸಬೇಕೆಂದು ಕಡೂರು ತಹಸೀಲ್ದಾರ್‌ರವರನ್ನು ಜವಾಬ್ದಾರರನ್ನಾಗಿ ಮಾಡಿ ಆದೇಶ ನೀಡಿದೆ ಎಂದರು.