

ತರೀಕೆರೆ: ಎಚ್.ತಿಮ್ಮಾಪುರ ಸ.ನಂ24ರಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಟಿ.ಜೆ.ಗೋಪಿಕುಮಾರ್ ಒತ್ತುವರಿ ಮಾಡಿ 6.28 ಎಕರೆ ಜಾಗದಲ್ಲಿ ಬೆಳೆಸಿದ್ದ ಅಡಕೆ ಮರಗಳನ್ನು ತರೀಕೆರೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬುಧವಾರ ತೆರವುಗೊಳಿಸಿದರು.
ಭದ್ರಾವತಿ ಉಪ ಅರಣ್ಯ ವಿಭಾಗದ ಡಿಸಿಎ್ ಡಾ. ಕೆ.ಆಶೀಶ್ ರೆಡ್ಡಿ ಹಾಗೂ ತರೀಕೆರೆ ಉಪ ವಿಭಾಗದ ಎಸಿಎ್ ಉಮ್ಮಾರ್ ಬಾದ್ ಷಾ ನೇತತ್ವದಲ್ಲಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಜೆಸಿಬಿ ಮೂಲಕ ಅಡಕೆ ಮರಗಳನ್ನು ಬುಡಸಮೇತ ನೆಲಸಮಗೊಳಿಸಿದರು.
ಕಾರ್ಯಾಚರಣೆಯಲ್ಲಿ ಆರ್‌ಎ್ಒ ಆಸ್ಿ ಅಹಮದ್, ಡಿಆರ್‌ಎ್ಒಗಳಾದ ದಿನೇಶ್, ಬಿ.ಧರ್ಮನಾಯ್ಕ, ಮುನ್ನಾವರ್ ಪಾಷಾ, ಜಗದೀಶ್, ಗಸ್ತು ಅರಣ್ಯ ಪಾಲಕರಾದ ಎನ್.ರಾಜೇಂದ್ರ, ಬಸವರಾಜು, ಪ್ರಸನ್ನ, ದೇವಪ್ಪ ಇತರರಿದ್ದರು.