

ಯಾದಗಿರಿ: ಇಂದಿನ ಒತ್ತಡದ ಜೀವನಕ್ಕೆ ಪ್ರತಿಯೊಬ್ಬರಿಗೂ ಗುರುವಿನ ಮಾರ್ಗದರ್ಶನ ಬಹಳ ಅಗತ್ಯವಾಗಿದೆ ಎಂದು ನಿವೃತ್ತ ಪ್ರಾಚಾರ್ಯ ಎಸ್.ಎಸ್.ಜುಗೇರಿ ಹೇಳಿದರು.
ಇಲ್ಲಿನ ಸಮೀಪದ ಚಿತ್ತಾಪುರ ತಾಲೂಕಿನ ಸೂಗೂರ ಎನ್.ಭೋಜಲಿಂಗೇಶ್ವರ ಮಠದಲ್ಲಿ ಭಾನುವಾರ ಹಮ್ಮಿಕೊಂಡ ಗುರುಪೂರ್ಣಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಶರಣರ, ಸೂಫಿ-ಸಂತರ ನಾಡು. ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ಮಾನಸಿಕ ನೆಮ್ಮದಿ ಜತೆಗೆ ಬದಲಾವಣೆಗೆ ಪ್ರೇರಣೆ ಸಿಗುತ್ತದೆ ಎಂದರು.
ಹಿರಪ್ಪ ತಾತಾನವರು ಆಶೀರ್ವಚನ ನೀಡಿ, ಮಠಕ್ಕೆ ಭಕ್ತರೇ ನಿಜವಾದ ಆಸ್ತಿಯಾಗಿದ್ದಾರೆ. ಎಲ್ಲರ ಸಹಕಾರದಿಂದ ಸದಾ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸಮಾಜಮುಖಿ ಕಾರ್ಯ ಮಾಡಿಕೊಂಡು ಬರಲಾಗುತ್ತಿದೆ. ಆ ಗುರುವಿನ ಕೃಪೆಯಿಂದ ಎಲ್ಲರ ಕಷ್ಟಗಳು ದೂರ ಆಗಲಿದ ಎಂದು ಹಾರೈಸಿದರು.
ಈ ವೇಳೆ ಆಸ್ಕರ್ ಫೌಂಡೇಷನ್‌ನಿAದ ವಿದ್ಯಾರ್ಥಿಗಳಿಗೆ ಕಲಿಕಾ ಕಿಟ್ ವಿತರಿಸಲಾಯಿತು. ಈರಣ್ಣ ಬಲಕಲï, ಮಹಾಂತೇಶಗೌಡ ಲಿಂಗಸೂರ, ಮಲ್ಲಿಕಾರ್ಜುನ ಬಂದಳ್ಳಿ, ವಿಶ್ವನಾಥರಡ್ಡಿ ಸೂಗೂರ, ಮೋಹನ ರಾಠೋಡ, ಮಹಾದೇವಪ್ಪ ಸಾಹುಕಾರ, ಮಲ್ಲಿಕಾರ್ಜುನ ಬಂದಳ್ಳಿ, ರಾಜು ಹತ್ತಿಕುಣಿ, ಬಸವರಾಜ ಹವಾಲ್ದಾರ್, ಪ್ರಭು ಹೂಗಾರ, ಮಲ್ಲಯ್ಯ ಕಸಬಿ, ಮಲ್ಲಿಕಾರ್ಜುನ ಬಡಿಗೇರ, ಸಿದ್ರಾಮರಡ್ಡಿ ಚಿನ್ನಾಕಾರ, ಬಸವರಾಜ ಪಾಟೀಲï, ಸುರೇಶ ಅಲ್ಲಿಪೂರ, ಶರಣು ಟೇಲರ್, ಯಮುನಪ್ಪ, ಧರಿಯಪ್ಪ ಎಗ್ಗಾ ಸೇರಿದಂತೆ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು. ಶರಣಪ್ಪ ನಾಶಿ ಸ್ವಾಗತಿಸಿದರೆ, ಶಂಕರಗೌಡ ಪಾಟೀಲï ನಿರೂಪಿಸಿ, ವಂದಿಸಿದರು.