ಒತ್ತಡ ನಿವಾರಿಸುವ ದಿವ್ಯ ಔಷಧ ಯೋಗ

2306 Surapur 02
Published on

ಸುರಪುರ: ನಮ್ಮ ಜೀವನದ ಒತ್ತಡ ನಿವಾರಿಸುವ ದಿವ್ಯ ಔಷಧ ಯೋಗವಾಗಿದೆ ಎಂದು ಜನನಿ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯೆ ಬಸವರಾಜೇಶ್ವರಿ ಘಂಟಿ ಹೇಳಿದರು.

ನಗರದ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಜನನಿ ಮಹಿಳಾ ಪದವಿ ಕಾಲೇಜು ಹಮ್ಮಿಕೊಂಡ ೧೧ನೇ ವರ್ಷದ ಅಂತಾರಾಷ್ಟಿçÃಯ ಯೋಗ ದಿನ ಕರ‍್ಯಕ್ರಮದಲ್ಲಿ ಮಾತನಾಡಿದ ಅವರು, ಯೋಗ ಭಾರತದ ಅಮೂಲ್ಯ ಕೊಡುಗೆಯಾಗಿದ್ದು, ಆರೋಗ್ಯವಂತ ಶರೀರ ಹೊಂದಲು ಪ್ರತಿಯೊಬ್ಬರು ನಿತ್ಯ ಯೋಗ ಮಾಡಬೇಕು. ಯೋಗದಿಂದ ಜೀವನ ಶೈಲಿ ಉತ್ತಮವಾಗುತ್ತದೆ ಎಂದು ಹೇಳಿದರು.

ಯೋಗ ದೈಹಿಕ ವ್ಯಾಯಾಮ ಮಾತ್ರವಲ್ಲದೆ, ಮನಸ್ಸು ಮತ್ತು ಆತ್ಮದ ಸಮಗ್ರ ಏಕೀಕರಣ ಮಾಡುವ ಪ್ರಕ್ರಿಯೆಯಾಗಿದೆ. ಬದಲಾಗುತ್ತಿರುವ ಜೀವನಶೈಲಿಯಲ್ಲಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಬಹಳ ಮುಖ್ಯವಾಗಿದೆ ಎಂದರು.

ಅಮರೇಶ್ವರ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಆದಿಶೇಷ ನೀಲಗಾರ ಮಾತನಾಡಿದರು. ಉಪನ್ಯಾಸಕ ಅಂಬ್ರೇಶ ಚಿಲ್ಲಾಳ ಯೋಗದ ಪ್ರಕಾರಗಳ ಮಾಹಿತಿ ನೀಡಿ ತಾಲೀಮು ಮಾಡಿಸಿದರು. ಉಪನ್ಯಾಸಕರಾದ ತಿರುಪತಿ ಕೆಂಭಾವಿ, ಬೀರೇಶಕುಮಾರ ದೇವತ್ಕಲ್, ನಬಿಸಾಬ್, ಹಣಮಂತ್ರಾಯ ದೊರಿ, ಶ್ರೀದೇವಿನಾಯಕ, ಶೋಭ, ಜ್ಯೋತಿ, ಚಂದ್ರಶೇಖರ್ ನಾಯ್ಕೋಡಿ, ಸವಿತಾ ಸೂಗೂರ, ಶ್ರುತಿ ನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net