ಒತ್ತಡ ನಿವಾರಣೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿ

ctd sjm....
????????????????????????????????????
Published on

ಚಿತ್ರದುರ್ಗ: ವರ್ಷವಿಡೀ ಪಠ್ಯ ಚಟುವಟಿಕೆಗಳಲ್ಲಿ ತೊಡಗಿರುವ ವಿದ್ಯಾರ್ಥಿಗಳ ಒತ್ತಡ ನಿವಾರಣೆ ಹಾಗೂ ಅವರಲ್ಲಿರುವ ಕ್ರೀಡೆ ಮತ್ತು ಸಾಂಸ್ಕೃತಿಕ ಪ್ರತಿಭೆ ಅನಾವರಣಕ್ಕೆ‘ಸ್ಫೂರ್ತಿ’ಉತ್ತಮ ವೇದಿಕೆಯಾಗಿದೆ ಎಂದು ನಗರದ ಎಸ್‌ಜೆಎಂಐಟಿ ಕಾಲೇಜು ಪ್ರಾಚಾರ್ಯ ಡಾ.ಪಿ.ಬಿ. ಭರತ್ ಹೇಳಿದರು.

ಕಾಲೇಜಿನಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಸ್ಫೂರ್ತಿ-2025 ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಪರಸ್ಪರ ಸಹಕಾರ ಮನೋಭಾವ, ನಾಯಕತ್ವದ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಪ್ರಾಜೆಕ್ಟ್‌ಗಳ ಪ್ರದರ್ಶನ ‘ಟೆಕ್ನೋವೇಟ್’, ತಾಂತ್ರಿಕ ಕೌಶಲಗಳನ್ನು ಸಾದರಪಡಿಸಲು ಪ್ರದರ್ಶನ ಸಹಕಾರಿಯಾಗಿದೆ ಎಂದರು.

ದಾವಣಗೆರೆ ಜಿಎಂ ವಿವಿ ಪ್ರಾಧ್ಯಾಪಕ ಡಾ.ಕೆ.ಎನ್.ಭರತ್ ಮಾತನಾಡಿ, ಈಚಿನ ದಿನಗಳಲ್ಲಿ ಸಂಶೋಧನಾತ್ಮಕ ತರಗತಿಗಳ ಅವಧಿ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರಾಜೆಕ್ಟ್ ಸಿದ್ಧಪಡಿಸಲು ಅಲ್ಪಮಟ್ಟಿನ ತೊಂದರೆಯಾಗಿದೆ. ಉಪನ್ಯಾಸಕರು ಸೂಕ್ತ ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳಿಗೆ ಎದುರಾಗಿರುವ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.

ದಾವಣಗೆರೆ ಜಿಎಂ ವಿವಿ ಸಹ ಪ್ರಾಧ್ಯಾಪಕ ಡಾ. ರಾಜಶೇಖರ್ ಬಿ. ಸೋಮಸಾಗರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರಾಜೆಕ್ಟ್ ಗಳನ್ನು ಪ್ರಸ್ತುತಪಡಿಸಲು ಹಾಗೂ ಪ್ರಾಜೆಕ್ಟ್‌ನ ಸಂಪೂರ್ಣ ಮಾಹಿತಿ ಹಂಚಿಕೊಳ್ಳಲು ಟೆಕ್ನೋವೇಟ್ ಅವಕಾಶ ಒದಗಿಸಿದೆ. ಪ್ರಾಜೆಕ್ಟ್‌ಗಳನ್ನು ಕೇವಲ ಶೈಕ್ಷಣಿಕ ದೃಷ್ಟಿಗೆ ಸೀಮಿತಗೊಳಿಸದೆ ನೈಜತೆಗೆ ಹತ್ತಿರವಾಗಿರಬೇಕು. ನಮಗೆ ಹೊಳೆಯುವ ಚಿಕ್ಕ, ಚಿಕ್ಕ ಅಲೋಚನೆ ಗಳೂ ದೊಡ್ಡ ಆವಿಷ್ಕಾರಕ್ಕೆ ದಾರಿಯಾಗುತ್ತವೆ ಎಂದರು.

‘ಸ್ಫೂರ್ತಿ’ಸಂಚಾಲಕ ಡಾ.ಎಸ್.ಪಿ. ಶಿವಕುಮಾರ್, ಡಾ.ಕೆ. ಕುಮಾರಸ್ವಾಮಿ, ಪ್ರೊ.ಸುಷ್ಮಿತಾದೇಬ್ ಇದ್ದರು.

ಪಿ.ಕೆ. ಪ್ರಣತಿ ಪ್ರಾರ್ಥಿಸಿದ ರು. ಸಿದ್ದೇಶ್, ಬಿಬಿ ಹಜಿರಾ ನಿರೂಪಿಸಿದರು. ಪ್ರೊ.ಎಸ್. ಚೇತನ್ ವಂದಿಸಿದರು.

ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಸಿದ್ಧಪಡಿಸಿದ 70 ಮಾದರಿಗಳನ್ನು ಪ್ರದರ್ಶಿಸಲಾಯಿತು.

ಸಿವಿಲ್ ಇಂಜಿನಿಯರಿಂಗ್ ವಿಭಾಗ ಎ.ಆರ್. ಲವಕುಮಾರ್, ಎಲೆಕ್ಟ್ರಿಕಲ್‌ವಿಭಾಗದ ಜಿ. ಶುಭಶ್ರೀ, ಎಲೆಕ್ಟ್ರಾನಿಕ್ ವಿಭಾಗದ ಎಸ್.ಎ.ಪಲ್ಲವಿ, ಕಂಪ್ಯೂಟರ್ ಸೈನ್ಸ್‌ನ ತೇಜಸ್ವಿನಿ ಎಸ್. ತೆಗ್ಗಿ ಹಾಗೂ ಮೆಕ್ಯಾನಿಕ್ ಇಂಜಿನಿಯರಿಂಗ್ ವಿಭಾಗದ ಎಂ. ಸಿದ್ಧೇಶ್ ತಂಡಗಳು ಸಿದ್ಧಪಡಿಸಿದ ವಿವಿಧ ಮಾದರಿಗಳು ಅತ್ಯುತ್ತಮ ಪ್ರಾಜೆಕ್ಟ್ ಬಹುಮಾನಗಳಿಗೆ ಭಾಜನವಾದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net