ಒಡೆದ ಮನಸ್ಸು ಬೆಸೆದ ನ್ಯಾಯಾಧೀಶ

bidar
Published on

ಬೀದರ್: ಕುಟುಂಬ ಕಲಹದಿಂದ ದೂರವಾಗಿದ್ದ ದಂಪತಿ ರಾಜಿ ಸಂಧಾನದ ಮೂಲಕ ಒಂದಾಗಿದ್ದಾರೆ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬುಧವಾರ ಸಂಧಾನ ಮಾಡಿಸಿದ್ದರಿಂದ ಪತಿ-ಪತ್ನಿ ಮತ್ತೆ ಒಟ್ಟಾಗಿ ಬಾಳಲು ಸಮ್ಮö್ಮತಿಸಿದ್ದಾರೆ.

ಕಲಬುರಗಿ ಜಿಲ್ಲೆ ಯಡ್ರಾಮಿಯ ವಿಠಲ್ ಲP್ಷÀ್ಮಣ ಅವರು ನಗರದ ಸುನೀತಾ ಅವರೊಂದಿಗೆ ಕೆಲವು ವರ್ಷಗಳ ಹಿಂದೆ ಮದುವೆ ಆಗಿದ್ದರು. ಇವರಿಗೆ ಇದ್ದ ಒಂದು ಗಂಡು ಮಗು ಸಾವನ್ನಪ್ಪಿತ್ತು. ಮಗು ಸಾವಿಗೀಡಾದ ನಂತರ ಪತಿ-ಪತ್ನಿಯಲ್ಲಿ ವೈಮನಸ್ಸು ಹೆಚ್ಚಾಗಿದೆ. ಇಬ್ಬರ ಮನಸ್ಸುಗಳು ಒಡೆದಿದ್ದವು. ಬೈಯುವುದು, ಹೊಡೆಯುವುದು ಮಾಡುತ್ತಿದ್ದಾರೆ ಎಂದು ಸುನೀತಾ ಅವರು ಪತಿ ವಿರುದ್ಧ ಇಲ್ಲಿನ ಮಹಿಳಾ ಠಾಣೆಗೆ ದೂರು ನೀಡಿದ್ದರು.

ಮಹಿಳಾ ಠಾಣೆ ಸಿಪಿಐ ವಿಜಯಕುಮಾರ ಅವರು ರಾಜಿ ಸಂಧಾನಕ್ಕಾಗಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಕಳುಹಿಸಿದ್ದಾರೆ. ಪತಿ, ಪತ್ನಿಯನ್ನು ಇಲ್ಲಿನ ಪ್ರಾಧಿಕಾರಕ್ಕೆ ಕಚೇರಿಗೆ ಕರೆಸಿದ ಹಿರಿಯ ಸಿವಿಲ್ ನ್ಯಾಯಾಧೀಶರೂ ಆದ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಸ್.ಕೆ. ಕನಕಟ್ಟೆ ಅವರು ಕೌಟುಂಬಿಕ ಸಮಸ್ಯೆ ಆಲಿಸಿ, ಬುದ್ಧಿಮಾತು ಹೇಳಿದ್ದಾರೆ. ಇದಕ್ಕೆ ಒಪ್ಪಿದ್ದರಿಂದ ದಂಪತಿಗೆ ರಾಜಿ ಸಂಧಾನದ ಮೂಲಕ ಒಂದುಗೂಡಿಸಿ ಸಿಹಿ ಹಂಚಿದರು. ಸಿಪಿಐ ವಿಜಯಕುಮಾರ, ಪ್ರಾಧಿಕಾರದ ಸಿಬ್ಬಂದಿ ಜಗದೀಶ್ವರ ದೊರೆ, ಆಕಾಶ ಸಜ್ಜನ್, ಜೀವನ, ಯೋಹಾನ, ಮಂಜುನಾಥ ರೊಟ್ಟಿ ಮತ್ತು ದಂಪತಿ ಸಂಬAಧಿಕರು ಇದ್ದರು.

ಕಾನೂನು ಅರಿವು ನೆರವು ಕರ‍್ಯಕ್ರಮ: ಬೀದರ್: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಪ್ರತಾಪನಗರದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಮಕ್ಕಳ ಹಕ್ಕು ಕುರಿತು ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಮಂಗಳವಾರ ಜರುಗಿತು. ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಕೆ. ಕನಕಟ್ಟೆ ಉದ್ಘಾಟಿಸಿ ಮಾತನಾಡಿದರು. ನ್ಯಾಯವಾದಿ ಮಂಗಲಾ ಅವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸವಲತ್ತು, ಜಯಶ್ರಿ ಪಾಟೀಲ್ ಅವರು ಮಕ್ಕಳ ಹಕ್ಕುಗಳ ಕುರಿತು ಉಪನ್ಯಾಸ ನೀಡಿದರು. ಸುಭಾಷ ನಾಗೂರೆ ಅಧ್ಯP್ಷÀತೆ ವಹಿಸಿದ್ದರು. ಆಕಾಶ ಸಜ್ಜನ ಇತರರಿದ್ದರು. ಸಂಗಮ್ಮ ಸ್ವಾಗತಿಸಿದ್ದರು. ಶೀಲಾ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net