

ಕೊಡೇಕಲ್: ರಾಜ್ಯ ಹೆದ್ದಾರಿ ಮೂಲಕ ಹಾದು ಹೋಗಿರುವ ಉಪಕಾಲುವೆಯ ಪೈಪ್ ಒಡೆದ ಕಾರಣ ಅಪಾರ ಪ್ರಮಾಣದ ನೀರು ಪೋಲಾಗುವುದರ ಜತೆಗೆ ನೀರಿನ ರಭಸಕ್ಕೆ ರಾಜ್ಯ ಹೆದ್ದಾರಿ ದಿನದಿಂದ ದಿನಕ್ಕೆ ಕುಸಿಯುವ ಮೂಲಕ ಪ್ರಯಾಣಿಕರಿಗೆ ಅಪಾಯ ಎದುರಿಸುವಂತಾಗಿದೆ.
ರಾಜ್ಯ ಹೆದ್ದಾರಿ ೧೫೫ರ ಮೂಲಕ ಹಾದು ಹೋಗಿರುವ ಡೌನ್‌ಸ್ಟಿಮ್ ಉಪಕಾಲುವೆ ಸಂಖ್ಯೆ ೧ ಒಡೆದು ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದು ಒಂದಡೆಯಾದರೆ ಇನ್ನೂ ನೀರಿನ ರಭಸಕ್ಕೆ ಹೆದ್ದಾರಿ ಕುಸಿತಗೊಂಡು ದೊಡ್ಡ ಗುಂಡಿ ಉಂಟಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಜೊಗುAಡಬಾವಿ ಸೇರಿ ಸುತ್ತಮುತ್ತಲಿನ ಗ್ರಾಮಗಳ ರೈತರು ಜಮೀನುಗಳಿಗೆ ಕಾಲುವೆ ನೀರು ಹರಿಸಲು ರಾಜ್ಯ ಹೆದ್ದಾರಿ ಮೂಲಕ ಸಿಮೆಂಟ್ ಪೈಪ್ ಹಾಕಲಾಗಿದ್ದು, ಸದ್ಯ ಹೆದ್ದಾರಿ ಪಕ್ಕದಲ್ಲಿಯೇ ಪೈಪ್ ಒಡೆದ ಕಾರಣ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಈ ನೀರಿನ ರಭಸಕ್ಕೆ ಹೆದ್ದಾರಿ ತಳಪಾಯ ದುರ್ಬಲಗೊಂಡು ದೊಡ್ಡದಾದ ಕಂದಕವೊAದು ನಿರ್ಮಾಣವಾಗಿದ್ದರಿಂದ ವಾಹನ ಸಂಚಾರಕ್ಕೆ ಸಂಚಕಾರ ತಂದೊಡ್ಡಿದೆ.
ತಿAಗಳ ಹಿಂದೆ ಕಾಲುವೆ ಪೈಪ್ ಒಡೆದು ಹೋಗಿ ಚಿಕ್ಕ ಗಾತ್ರದ ಕಂದಕ ಉಂಟಾಗಿತ್ತು. ಆದರೆ ಯಾವಾಗ ಕಾಲುವೆಯಲ್ಲಿ ನೀರು ಹರಿಯಿತೋ ಆಗ ನೀರಿನ ರಭಸಕ್ಕೆ ಚಿಕ್ಕ ಗಾತ್ರದ ಕಂದಕ ದೊಡ್ಡದಾಗಿ ರಸ್ತೆಯ ಕುಸಿತಕ್ಕೆ ಕಾರಣವಾಗಿದೆ.
ನಿತ್ಯ ಇದೇ ರಸ್ತೆಯಲ್ಲಿ ಸಂಚಾರ ಮಾಡುವ ನಿಗಮದ ಅಧಿಕಾರಿಗಳಿಗೆ ಉಪ ಕಾಲುವೆ ಪೈಪ್ ದುರಸ್ತಿ ಮಾಡಿಸುವ ಗೋಜಿಗೆ ಹೋಗದೆ ನಿರ್ಲಕ್ಷÈ ವಹಿಸಿದ್ದರಿಂದ ಹೆದ್ದಾರಿ ಕುಸಿಯಲು ಮೂಲ ಕಾರಣವಾಗಿದೆ ಎಂದು ರೈತ ಶರಣು ಗೌರಡ ಆರೋಪಿಸಿದ್ದಾರೆ.
ಈ ಕೂಡಲೇ ಸಂಬAಧಿಸಿದ ಅಧಿಕಾರಿಗಳು ಉಪಕಾಲುವೆ ಪೈಪ್ ಹಾಗೂ ಕುಸಿದ ರಸ್ತೆಯ ದುರಸ್ತಿ ಮಾಡಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು.