ಒಗ್ಗಟ್ಟಿನಿಂದ ಹಬ್ಬ ಆಚರಿಸಿ

08-8
ಎಂ.ಕೆ.ಹುಬ್ಬಳ್ಳಿ ಉಪಪೊಲೀಸ್ ಠಾಣೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಾಂತಿ ಪಾಲನಾ ಸಭೆಯಲ್ಲಿ ಸಿಪಿಐ ಮಹಾಂತೇಶ ಹೊಸಪೇಟ ಮಾತನಾಡಿದರು. ಪಿಎಸ್‌ಐ ಎಚ್.ಎಲ್.ಧರ್ಮಟ್ಟಿ, ಜಿ.ಜಿ.ಹಂಪನ್ನವರ, ಎನ್.ಸಿ.ಗಣಾಚಾರಿ, ಎಂ.ಎಂ.ಖಾಜಿ ಇತರರಿದ್ದರು.
Published on

ಎಂ.ಕೆ.ಹುಬ್ಬಳ್ಳಿ, ಬೆಳಗಾವಿ: ಈದ್ ಮಿಲಾದ್ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಹಿಂದು-ಮುಸ್ಲಿಮರು ಒಗ್ಗಟ್ಟಿನಿಂದ ಆಚರಿಸಿ ಭಾವೈಕ್ಯತೆ ಮೆರೆಯಬೇಕೆಂದು ಕಿತ್ತೂರು ಪೊಲೀಸ್ ಠಾಣೆ ಸಿಪಿಐ ಮಹಾಂತೇಶ ಹೊಸಪೇಟ ಹೇಳಿದರು.

ಸ್ಥಳೀಯ ಉಪ ಪೊಲೀಸ್ ಠಾಣೆಯಲ್ಲಿ ಗುರುವಾರ ಕಿತ್ತೂರು ಪೊಲೀಸ್ ಠಾಣೆ ವತಿಯಿಂದ ಹಮ್ಮಿಕೊಂಡಿದ್ದ ಶಾಂತಿ ಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವಂತ ಘಟನೆಗಳು ಕಂಡುಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಪಿಎಸ್‌ಐ ಎಚ್.ಎಲ್.ಧರ್ಮಟ್ಟಿ, ಎಎಸ್‌ಐ ಜಿ.ಜಿ.ಹಂಪನ್ನವರ, ಎನ್. ಸಿ.ಗಣಾಚಾರಿ, ಎಂ.ಎಂ.ಖಾಜಿ, ಸುರೇಶ ಮುತ್ನಾಳ, ಜಾವೀದ್ ಜಮಾದಾರ್, ಮಲ್ಲಪ್ಪ ನಾಗನೂರ, ರುದ್ರಪ್ಪ ತೋರಗಲ, ಮುಗುಟಸಾಬ್ ಜಮಾದಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net