ಒಗ್ಗಟ್ಟಿನಿಂದ ಸಮಾಜ ಸಂಘಟಿಸಿ

BANJARA
Published on


ಯಾದಗಿರಿ: ಯಾವುದೇ ಸಮಾಜದ ಆರ್ಥಿಕ ಮತ್ತು ಸಾಮಾಜಿಕವಾಗಿ ಮುಂದೆ ಬರಬೇಕಾದರೆ ಸಂಘಟನೆ ಅತೀಮುಖ್ಯ ಎಂದು ಬಂಜಾರ ಸಮಾಜದ ಯುವ ಮುಖಂಡ ರಮೇಶ ಪವಾರ ಬದ್ದೆಪಲ್ಲಿ ತಿಳಿಸಿದರು.

ನಗರದ ಎನ್ವಿಎಂ ಸಭಾಂಗಣದಲ್ಲಿ ಬುಧವಾರ ಜರುಗಿದ ಬಂಜಾರ ಕ್ರಾಂತಿದಳ ಜಿಲ್ಲಾ ಘಟಕದ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಒಗ್ಗಟ್ಟಿನ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕು. ಅಲ್ಲದೆ ನಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಜಿಲ್ಲೆಯ 6 ತಾಲೂಕುಗಳ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಶಹಪುರ ತಾಲೂಕಾಧ್ಯಕ್ಷರಾಗಿ ಶಿವಾಜಿ ಚೌವ್ಹಾಣ್, ಹುಣಸಿಗಿ ಬಸವರಾಜ ಗೆದ್ದಲಮರಿ ತಾಂಡ, ಸುರಪುರ ಮಲ್ಲೇಶ್ ಭೀಮ ನಾಯಕ್ ಕಕ್ಕೆರಾ, ವಡಿಗೇರಾ ಲಕ್ಷ್ಮಣ ನಾಯಕ್ ಚೌವ್ಹಾಣ್ ಉಳ್ಳೆಸೂಗುರು, ಯಾದಗಿರಿ ರಮೇಶ್ ಸಕ್ರು, ಗುರುಮಠಕಲ್ ಬಸವರಾಜ್ ಸುರೇಶ್ ಅವರನ್ನು ನೇಮಕ ಮಾಡಲಾಯಿತು.

ಜಿಲ್ಲಾಧ್ಯಕ್ಷ ವಾಚನಾಯಕ್ ರಾಠೊಡ್, ಬಲದೇವ ನಾಯಕ್, ರಾಜು ರಾಠೊಡ್, ಅಶೋಕ್ ಚೌಹಾನ್ ಗುಂಡಳ್ಳಿ, ನಂದು ಚೌಹಾನ್ ಅಶೋಕ್ ನಗರ, ರವಿ ಜಾದವ್ ಹುಣಸಿಗಿ, ಶಾಂತುಲಾಲ ಪವಾರ ಗೆದ್ದಲಮರಿ ತಾಂಡ, ರಮೇಶ ರಾಠೊಡ ರಾಜೋಳ ತಾಂಡ, ಗೋವಿಂದ ಚೌಹಾಣ್ ಗುಂಡಳ್ಳಿ, ಮೋಹನ್ ಚೌಹಾನ್, ಶ್ರೀಕಾಂತ್ ಚೌಹಾನ್ ಗುಂಡಳ್ಳಿ ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net