ಒಗ್ಗಟ್ಟಿನ ಶ್ರಮಕ್ಕೆ ಇಂದಿನ ಕಟ್ಟಡ ಸಾಕ್ಷಿ

21ARATAL1
Published on

ಅರಟಾಳ: ಗ್ರಾಮದ ಅಭಿವೃದ್ಧಿಗಾಗಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಒಗ್ಗಟ್ಟಿನಿಂದ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣವಾಗಿದ್ದು, ಅದರ ಸದುಪಯೋಗವಾಗಲಿ ಎಂದು ಹುಲಜಂತಿ ಮಾಳಿಂಗರಾಯ ಮಹಾರಾಯರು ಹೇಳಿದರು.

ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನೂತನವಾಗಿ ನಿರ್ಮಾಣವಾದ ಗ್ರಾಮ ಪಂಚಾಯಿತಿ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಅನೇಕ ಜನರ ಶ್ರಮದಿಂದ ಕಟ್ಟಡ ನಿರ್ಮಾಣವಾಗಿದೆ. ಸರ್ಕಾರದ ಯೋಜನೆಗಳು ಗ್ರಾಮ ಪಂಚಾಯಿತಿಗೆ ದೊರೆಯಬೇಕು. ಮೊಟ್ಟ ಮೊದಲ ರಾಜಕಾರಣದ ಹೆಜ್ಜೆ ಗ್ರಾಮ ಪಂಚಾಯಿತಿಯಿಂದ ಪ್ರಾರಂಭವಾಗಿ, ನಂತರ ರಾಜ್ಯ, ದೆಹಲಿ ಗದ್ದುಗೆ ತಲುಪುತ್ತದೆ. ಉದ್ಘಾಟನೆಗೆ ಅಧಿಕಾರಿಗಳಷ್ಟೇ ಅಲ್ಲದೆ ಸಾಧು ಸಂತರನ್ನು ಆಹ್ವಾನಿಸಿ ಉದ್ಘಾಟನೆ ಮಾಡಲಾಗಿದೆ ಎಂದರು.

ಕೌಲಗುಡ್ಡದ ಶ್ರೀಸಿದ್ಧಯೋಗಿ ಅಮರೇಶ್ವರ ಮಹಾರಾಜರು ಮಾತನಾಡಿ, ಮಹಿಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತ ನೂತನ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆ ಮಾಡುತ್ತಿರುವುದು ಹೆಮ್ಮೆ ಸಂಗತಿ ಎಂದರು. ಪಿಡಿಒ ಎ.ಜಿ.ಎಡಕೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಪಂ ಅಧ್ಯಕ್ಷೆ ಕಾಂತಾಬಾಯಿ ಹಟ್ಟಿ, ಉಪಾಧ್ಯಕ್ಷ ಶಂಕರ ಕೆಂಚಗೊಂಡ, ಬಾಡಗಿ ಶ್ರೀಬಣಸಿದ್ಧ ಮಹಾರಾಜರು, ಸಂಗಯ್ಯ ಹಿರೇಮಠ, ತಾಪಂ ಇಒ ಶಿವಾನಂದ ಕಲ್ಲಾಪುರ, ತಾಪಂ ಸಹಾಯಕ ನಿರ್ದೇಶಕ ಎಂ.ಆರ್.ಕೋತವಾಲ, ಕಾರ್ಯದರ್ಶಿ ಆನಂದ ಗಿರಿಜಾಗೋಳ, ಗ್ರಾಪಂ ಸದಸ್ಯ ರಾಮಪ್ಪ ಪೂಜಾರಿ, ಶಿವಾನಂದ ಖ್ಯಾಡಿ, ಮಹಾದೇವ ಡಂಗಿ, ಸಿದ್ದು ಹಳ್ಳಿ, ಶಿವಾನಂದ ನೇಮಗೌಡ, ರೇವಪ್ಪ ತೇಲಿ, ಏಕನಾಥ ಕಾಂಬಳೆ, ಶಿವಾನಂದ ಪಾಟೀಲ, ಸದಾಶಿವ ಹೊನಗೌಡ, ಚನ್ನಪ್ಪ ಕಾಗವಾಡ, ಅನ್ನಪೂರ್ಣಾ ಮುಧೋಳ, ಸರಸ್ವತಿ ಕಾಂಬಳೆ, ಗಂಗವ್ವ ಅರ್ಜುಣಗಿ, ಮಹಾದೇವಿ ಪಾಟೀಲ, ಜಯಶ್ರೀ ಡಂಗಿ, ಭಾರತಿ ನಾಯಿಕ, ಲಕ್ಷ್ಮಿಬಾಯಿ ಮಮದಾಪೂರ, ಕಾಸವ್ವ ಹೊನಗೌಡ, ಬಂಗಾರೆವ್ವ ಐಗಳಿ, ಯಲ್ಲವ್ವ ನಾಟಿಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net