ಒಗ್ಗಟ್ಟಾಗಿದ್ದರೆ ಪಕ್ಷಕ್ಕೆ ಅನುಕೂಲ,ಸಚಿವ ಭೋಸರಾಜು

CTD CONGRESS----
Published on

ಚಿತ್ರದುರ್ಗ:ಕಾರ‌್ಯಕರ್ತರು ಸಂಘಟಿತರಾದಾಗ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಧ್ಯ ಎಂದು ಸಣ್ಣ ನೀರಾವರಿ, ವಿಜ್ಞಾನ, ತಂತ್ರಜ್ಞಾನ ಸಚಿವ ಎನ್. ಎಸ್. ಭೋಸರಾಜು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿ, ಜಿಪಂ, ತಾಪಂ ಸದಸ್ಯರಾಗುವ ಅವಕಾಶ ಕಾರ್ಯಕರ್ತರಿಗೆ ಎದುರಾಗಿದೆ. ಎಲ್ಲರೂ ಶಾಸಕ, ಸಚಿವರಾಗುವುದು ಕಷ್ಟ. ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದರೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಯಾ ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಜವಾಬ್ದಾರಿ ಕೊಟ್ಟಿದ್ದಾರೆ. ಏನಾದರೂ ಸಮಸ್ಯೆಗಳಿದ್ದರೆ ನಾಯಕರ ಗಮನಕ್ಕೆ ತರಬೇಕು. ಇಲಾಖೆ ಕೆಲಸಗಳಿದ್ದರೆ ತಿಳಿಸಿ, ಪ್ರಾಮಾಣಿಕವಾಗಿ ಮಾಡಲು ಸಿದ್ದನಿದ್ದೇನೆ ಎಂದು ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಯಸಿಂಹ ಮಾತನಾಡಿ, ಸರ್ವ ಧರ್ಮವನ್ನು ಗೌರವಿಸುವ ಕಾಂಗ್ರೆಸ್‌ನಿಂದ ಮಾತ್ರ ಎಲ್ಲ ಜಾತಿ, ಧ ರ್ಮದವರಿಗೂ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಘೋಷಿಸಿದಂತೆ ಕಾಂಗ್ರೆಸ್ ಸರ್ಕಾರ ರಾಜ್ಯ ದಲ್ಲಿ ಅಧಿಕಾರಕ್ಕೆ ಬಂದಾಕ್ಷಣ ಐದು ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಕೋಮುವಾದಿ ಬಿಜೆಪಿ ಅಪ ಪ್ರಚಾರಕ್ಕೆ ಕಿವಿಗೊಡುವುದು ಬೇಡ ಎಂದು ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ. ತಾಜ್‌ಪೀರ್ ಮಾತನಾಡಿ, ಕೆರೆಗಳ ಅಭಿವೃದ್ದಿ ಸಮಿತಿ ನೇಮಕದಲ್ಲಿ ಕಾರ್ಯಕರ್ತರಿಗೆ ಆದ್ಯತೆ ನೀಡುವಂತೆ ಸಚಿವರಿಗೆ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆ.ಎಂ. ಹಾಲಸ್ವಾಮಿ, ನಗರಸಭೆ ಸದಸ್ಯ ನರಸಿಂಹಮೂರ್ತಿ, ಎಸ್.ಎನ್. ರವಿಕುಮಾರ್, ನಜ್ಮತಾಜ್, ಕೆ.ಪಿ. ಸಂಪತ್‌ಕುಮಾರ್, ಸೈಯದ್‌ಖುದ್ದೂಸ್, ಬಿ.ಟಿ. ಜಗದೀಶ್, ಗೀತಾನಂದಿನಿಗೌಡ, ಎನ್.ಡಿ. ಕುಮಾರ್, ಮುನಿರಾ ಎ. ಮಕಾಂದಾರ್, ಸೈಯದ್ ಮೊಹಿದ್ದೀನ್, ಪರ್ವಿನ್, ಇಂದಿರಾ, ಭೂತೇಶ್, ಸೈಯದ್ ವಲಿಖಾದ್ರಿ, ಮುದಸಿರ್‌ನವಾಜ್,ಪ್ರಕಾಶ್ ರಾಮನಾಯ್ಕ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net