

ಕುಡಚಿ: ಸರ್ಕಾರ ಹೊಸದಾಗಿ ಪ್ರಾರಂಭಿಸಿದ ಪುಣೆ-ಹುಬ್ಬಳ್ಳಿ ಒಂದೇ ಭಾರತ ರೈಲನ್ನು ಕುಡಚಿಯಲ್ಲೂ ನಿಲುಗಡೆ ಮಾಡಬೇಕೆಂದು ಮುಖಂಡ ಅಲ್ಲಾವುದ್ಧೀನ್ ರೋಹಿಲೆ ಸೇರಿ ಪಟ್ಟಣದ ಜನ ಆಗ್ರಹಿಸಿದ್ದಾರೆ.
ಈಚೆಗೆ ಆರಂಭಿಸಿದ ಒಂದೇ ಭಾರತ ರೈಲು ಕುಡಚಿ ಮಾರ್ಗವಾಗಿಯೇ ಓಡಾಡುತ್ತವೆ.
ಕುಡಚಿ ರೈಲು ನಿಲ್ದಾಣ ಮುಖ್ಯ ಕೇಂದ್ರ ಸ್ಥಾನವಾಗಿದ್ದು, ಬಾಗಲಕೋಟ ಜಿಲ್ಲೆಯ ಮುಧೋಳ, ಮಹಾಲಿಂಗಪುರ, ಬನಹಟ್ಟಿ, ತೇರದಾಳ, ರಬಕವಿ, ರಾಯಬಾಗ ತಾಲೂಕಿನ ಹಾರೂಗೇರಿ, ಪರಮಾನಂದವಾಡಿ, ಶಿರಗೂರ, ಗುಂಡವಾಡ, ಖೇಮಲಾಪುರ, ಸಿದ್ದಾಪುರ, ಯಲ್ಪಾರಟ್ಟಿ, ಕೋಳಿಗುಡ್ಡ, ಸುಟ್ಟಟ್ಟಿ, ನಿಲಜಿ, ಮೊರಬ ಜನರು ಈ ರೈಲು ಮಾರ್ಗವಾಯಗಿಯೇ ದೂರದ ನಗರಗಳಿಗೆ ಪ್ರಯಾಣ ಬೆಳೆಸುತ್ತಾರೆ. ಆದ್ದರಿಂದ ಕುಡಚಿ ನಿಲ್ದಾಣದಲ್ಲಿ ಒಂದೇ ಭಾರತ ರೈಲು ನಿಲುಗಡೆ ಮಾಡುವಂತೆ ಒತ್ತಾಯ ಕೇಳಿಬರುತ್ತಿದೆ.