ಒಂದೇ ದಿನದಲ್ಲಿ 8 ರೂ.ಏರಿಕೆ ಕಂಡ ಆಟೋ ಎಲ್ಪಿಜಿ ದರ, ರಿಕ್ಷಾ ಚಾಲಕರಿಗೆ ಶಾಕ್!

IMG-20200201-WA0015.jpg
Published on

ಹಾಸನ: ಒಂದೇ ದಿನದಲ್ಲಿ ಪ್ರತಿ ಲೀ. ಆಟೋ ಗ್ಯಾಸ್ ದರದಲ್ಲಿ 8 ರೂ. ಏರಿಕೆಯಾಗಿದ್ದು, ಆಟೋ ರಿಕ್ಷಾ ಚಾಲಕರು ಕಂಗಾಲಾಗಿದ್ದಾರೆ.

ಶುಕ್ರವಾರ 42 ರೂ.ಗಳಿದ್ದ ಆಟೋ ಎಲ್ಪಿಜಿ ದರ ಶನಿವಾರ ಮುಂಜಾನೆ ಲೀಟರ್ ಗೆ 50.29 ರೂ.ಗಳಿಗೆ ಏರಿಕೆಯಾಗಿದೆ.

ಆಟೋ ರಿಕ್ಷಾಗಳಿಗೆ ಗ್ಯಾಸ್ ಭರ್ತಿ ಮಾಡಿಸಲು ಹೋದ ಚಾಲಕರು ಹೊಸ ಬೆಲೆ ನೋಡಿ ಕಂಗಾಲಾಗಿದ್ದಾರೆ.

ಈಗಿನ ಬೆಲೆಯಲ್ಲಿ ಇಂಧನ ಖರೀದಿಸಿದರೆ ನಾವು‌ ಜೀವನ ನಡೆಸುವುದು ಸಾಧ್ಯವೇ ಆಗುವುದಿಲ್ಲ. ತಕ್ಷಣ ಜಿಲ್ಲಾಡಳಿತ ಕನಿಷ್ಠ ಪ್ರಯಾಣ ದರ ಏರಿಕೆಗೆ ಅವಕಾಶ ನೀಡಬೇಕು ಎಂದು ಚಾಲಕರು ಆಗ್ರಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net