ಒಂದೇ ದಿನ 20 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಒಂದೇ ದಿನ 20 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
Published on

ಹಾಸನ : ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ಸೋಮವಾರ ಒಂದೇ ದಿನ 20 ಅಭ್ಯರ್ಥಿಗಳು ಒಟ್ಟು ನಾಮಪತ್ರ ಸಲ್ಲಿಸಿದ್ದು, ಘಟಾನುಟಿ ನಾಯಕರು ಸ್ಪರ್ಧೆಗಿಳಿದಿದ್ದಾರೆ.

ಜಿಲ್ಲೆಯ ಏಳು ಕ್ಷೇತ್ರಗಳಿಂದ ಜೆಡಿಎಸ್ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಹೊಳೆನರಸೀಪುರದಿಂದ ಹೆಚ್.ಡಿ.ರೇವಣ್ಣ, ಬೇಲೂರು ಕ್ಷೇತ್ರದಿಂದ ಕೆ.ಎಸ್‌ಲಿಂಗೇಶ್, ಹಾಸನದಿಂದ ಹೆಚ್.ಪಿ.ಸ್ವರೂಪ್, ಅರಕಲಗೂಡಿನಿಂದ ಎ.ಮಂಜು ಅವರು ಎರಡೆರಡು ನಾಮಪತ್ರ ಸಲ್ಲಿಕೆ ಮಾಡಿದರೆ, ಚನ್ನರಾಯಪಟ್ಟಣದಿಂದ ಸಿ.ಎನ್.ಬಾಲಕೃಷ್ಣ, ಆಲೂರು-ಸಕಲೇಶಪುರದಿಂದ ಹೆಚ್.ಕೆ.ಕುಮಾರಸ್ವಾಮಿ, ಅರಸೀಕೆರೆಯಿಂದ ಎನ್.ಆರ್.ಸಂತೋಷ್ ಅವರು ಒಂದು ಸೆಟ್ ನಾಮ ಪತ್ರ ಸಲ್ಲಿದ್ದಾರೆ.

ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಪ್ರೀತಂ ಜೆ.ಗೌಡ, ಬೇಲೂರಿನಿಂದ ಹೆಚ್.ಕೆ.ಸುರೇಶ್, ಅರಸೀಕೆರೆಯಿಂದ ಜಿವಿಟಿ ಬಸವರಾಜು, ಹೊಳೆನರಸೀಪುರದಿಂದ ದೇವರಾಜೇಗೌಡ, ಅರಕಲಗೂಡು ಯೋಗರಮೇಶ್, ಬೇಲೂರು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿ.ಶಿವರಾಮ್, ಅರಕಲಗೂಡು, ಶ್ರವಣಬೆಳಗೊಳದಿಂದ ಇಬ್ಬರು ಎಎಪಿ ಅಭ್ಯರ್ಥಿಗಳು, ನೋದಾಯಿತವಲ್ಲದ ಪಕ್ಷದಿಂದ-3 ಸ್ವತಂತ್ರ ಅಭ್ಯರ್ಥಿಯಾಗಿ ಒಬ್ಬರು ಒಟ್ಟು 20 ಅಭ್ಯರ್ಥಿಗಳಿಂದ 27 ನಾಮಪತ್ರಗಳು ಸಲ್ಲಿಕೆಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net