ಬಳ್ಳಾರಿ : ಇಲ್ಲಿನ ಜಯನಗರದ ಶ್ರೀನಿವಾಸ್ ಅಪಾರ್ಟಮೆಂಟ್‌ನ ಬಾಡಿಗೆ ಮನೆಯಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರು ಅಜ್ಮೀರ್‌ಯಾತ್ರೆಗೆ ಹೋಗಿಬರುತ್ತೇನೆ ಎಂದು ಹೇಳಿ ಹೋದವರು ಮರಳಿ ಬಾರದೇ ಜು.07 ರಂದು ಕಾಣೆಯಾಗಿದ್ದು , ಪತ್ತೆಗೆ ಸಹಕರಿಸಬೇಕು ಎಂದು ಕುರಿತು ಕೌಲ್‌ಬಜಾರ್ ಪೊಲೀಸ್ ಠಾಣೆ ಸಿಪಿಐ ತಿಳಿಸಿದ್ದಾರೆ. ಎಂ.ಎಸ್. ನಜೀರ್ ಅಹಮದ್(50), ಮುನಿಯಾರ್ ರೊಖಾಯಾ (47), ಎಂ.ಎಸ್. ಸಾನಿಯ ಕೌಸರ್(21), ಶಗುಪ್ತ ಅಂಜುಮ್( 15) ನಾಪತ್ತೆಯಾದವರು. ಮಾಹಿತಿ ಸಿಕ್ಕಲ್ಲಿ ಕೌಲ್‌ಬಜಾರ್ ಪೊಲೀಸ್ ಠಾಣೆಯ ದೂ.08392-240731, 244145, ಪಿ.ಐ ಮೊ.9480803047, ಪಿಎಸ್‌ಐ ಮೊ.94808203085 ಅಥವಾ ಬಳ್ಳಾರಿ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.