ಯಾದಗಿರಿ : ತೀವ್ರ ಕುತೂಹಲ ಕೆರಳಿಸಿದ್ದ ಎರಡನೇ ಅವಧಿಯ ಗ್ರಾಮ ಪಂಚಾಯಿತಿ ಅಧ್ಯP್ಷÀ-ಉಪಾಧ್ಯP್ಷÀರ ಚುನಾವಣೆ ಶುಕ್ರವಾರ ಜಿಲ್ಲಾದ್ಯಂತ ಸುಸೂತ್ರ ಮತ್ತು ಶಾಂತಿಯುತವಾಗಿ ನಡೆದಿದೆ.
ಜೂ.೨೦ರಂದು ಜಿಲ್ಲೆಯ ೧೧೮ ಗ್ರಾಪಂಗಳಿಗೆ ಜಿಲ್ಲಾಡಳಿತ ಮೀಸಲಾತಿ ನಿಗದಿಪಡಿಸಿತ್ತು. ಬರೋಬ್ಬರಿ ೪೫ ದಿನ ಬಳಿಕ ಚುನಾವಣೆಗೆ ದಿನಾಂಕ ನಿಗದಿಯಾಗಿತ್ತು. ಯಾವುದೇ ಗೊಂದಲ ಆಗದಂತೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಚುನಾವಣೆ ಬಗ್ಗೆ ತರಬೇತಿ ಸಹ ನೀಡಿತ್ತು.
ಹಳ್ಳಿಗಾಡಿನಲ್ಲಿ ಪಂಚಾಯಿತಿ ಅಧ್ಯP್ಷÀ ಸ್ಥಾನ ಪ್ರತಿಷ್ಠೆಯಾದ ಕಾರಣ ಅಧಿಕಾರದ ಗಾದಿ ಏರಲು ಆಕಾಂಕ್ಷಿಗಳು ಸದಸ್ಯರನ್ನು ತಿಂಗಳುಗಟ್ಟಲೆ ಟೂರ್ ಹೊಡಿಸಿದ್ದರು. ಕೆಲವಡೆ ಕುದುರೆ ವ್ಯಾಪಾರ ಸಹ ಭರ್ಜರಿಯಾಗಿ ನಡೆದಿದ್ದು ಸುಳ್ಳಲ್ಲ. ಚುನಾವಣೆ ನಿಮಿತ್ತ ದೂರದ ಊರುಗಳಿಗೆ ಪ್ರವಾಸಕ್ಕೆ ತೆರಳಿದ್ದ ಸದಸ್ಯರು ಗುರುವಾರ ತಡರಾತ್ರಿ ಯಾದಗಿರಿಗೆ ಬಂದಿದ್ದು, ಇವರನ್ನು ನೇರವಾಗಿ ಚುನಾವಣೆ ಸಮಯಕ್ಕೆ ಕರೆದೊಯ್ಯುವ ಯೋಜನೆ ಹಾಕಿಕೊಂಡಿದ್ದ ಆಕಾಂಕ್ಷಿಗಳು ನಗರದ ವಿವಿಧ ಲಾಡ್ಜ್ಗಳಲ್ಲಿ ತಂಗಲು ವ್ಯವಸ್ಥೆ ಮಾಡಿದ್ದು ಕಂಡು ಬಂದಿತು.
ವಡಗೇರಾ ತಾಲೂಕಿನ ಉಳ್ಳೆಸೂಗುರು, ಗುರುಮಠಕಲ್‌ನ ಪಸ್‌ಪುಲ್ ಗ್ರಾಪಂ ಅಧ್ಯP್ಷÀ ಸ್ಥಾನಕ್ಕೆ ಚುನಾವಣೆ ನಡೆಸದಂತೆ ನ್ಯಾಯಾಲಯದಿಂದ ಕೆಲವರು ತಡೆಯಾಜ್ಞೆ ತಂದಿದ್ದಾರೆ. ಯಾದಗಿರಿ ತಾಲೂಕಿನ ೨೨, ಗುರುಮಠಕಲ್ ೧೭, ಶಹಾಪುರ ೨೩, ಹುಣಸಗಿ ೧೮, ವಡಗೇರಾ ೧೬, ಸುರಪುರ ೨೩ ಗ್ರಾಪಂಗಳಲ್ಲಿ ಚುನಾವಣೆ ನಡೆಯಿತು. ಹಲವೆಡೆ ಅವಿರೋಧ ಆಯ್ಕೆಯಾದರೆ, ಕೆಲವೆಡೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿತ್ತು. ಬೆಳಗ್ಗೆ ಹಾಗೂ ಮಧ್ಯಾಹ್ನ ಚುನಾವಣೆ ಪ್ರಕ್ರಿಯೆ ನಡೆಸಲಾಯಿತು. ಸೂP್ಷÀ್ಮಇರುವ ಪಂಚಾಯಿತಿಗಳ ಸುತ್ತ ೨೦೦ ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿತ್ತು.
ಪೊಲೀಸ್ ಇಲಾಖೆ ಸಹ ಆಯಾ ಗ್ರಾಪಂಗಳಲ್ಲಿ ಕಟ್ಟುನಿಟ್ಟಿನ ಬಂದೋಬಸ್ತ್ ಮಾಡಿತ್ತು. ನೂತನ ಅಧ್ಯP್ಷÀರಾದ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿದ್ದು, ಹಳ್ಳಿಗಳಲ್ಲಿ ರಾತ್ರಿ ೧೧ರವರೆಗೆ ಮೆರವಣಿಗೆ, ಪಟಾಕಿ ಮತ್ತು ಡಿಜೆ ಸೌಂಡ್ ಕೇಳಿಸಿತು. ಚುನಾವಣೆ ನಿಮಿತ್ತ ಶುಕ್ರವಾರ ಗ್ರಾಮೀಣ ಭಾಗದಿಂದ ಜನತೆ ನಗರ ಪ್ರದೇಶದತ್ತ ಸುಳಿಯದ ಕಾರಣ ಮಾರುಕಟ್ಟೆ ಒಂಥರ ಬಿಕೋ ಎನ್ನುತ್ತಿತ್ತು.
ಹೈಟೆನ್ಶನ್ ಕಣವಾಗಿದ್ದ ಗ್ರಾಪಂಗಳು: ಜಿಲ್ಲೆಯ ಬಹುತೇಕ ಗ್ರಾಪಂಗಳಲ್ಲಿ ಹೈವೋಲ್ಟೇಜ್ ವಾತಾವರಣ ನಿರ್ಮಾಣವಾಗಿತ್ತು. ವಿಶೇಷವಾಗಿ ಸುರಪುರ ತಾಲೂಕಿನ ೨೧ ಪಂಚಾಯಿತಿಗಳಲ್ಲಿ ಪರಿಸ್ಥಿತಿ ಫುಲ್ ಬಿಸಿಯಾಗಿತ್ತು. ಯಾವ ಚುನಾವಣೆ ಇದ್ದರೂ ಸುರಪುರ ಕ್ಷೇತ್ರದಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತವೆ. ಹೀಗಾಗಿ ಇಲ್ಲಿ ಹೆಚ್ಚು ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಬೆಳಗ್ಗೆಯಿಂದಲೇ ವಿವಿಧ ಪP್ಷÀಗಳ ಬೆಂಬಲಿಗರು ಪಂಚಾಯಿತಿ ಕಚೇರಿ ಸುತ್ತ ಬೀಡು ಬಿಟ್ಟಿದ್ದರು. ಚುನಾವಣಾಧಿಕಾರಿಗಳು ಬರುತ್ತಿದ್ದಂತೆ ಮತ್ತಷ್ಟು ರಂಗು ಪಡೆದುಕೊಂಡಿತು.
ನಾಲ್ಕು ಕಡೆ ನಡೆಯದ ಚುನಾವಣೆ : ಶಹಾಪುರ ತಾಲೂಕಿನ ಗೋಗಿಪೇಠ, ಸುರಪುರದ ಕಿರದಳ್ಳಿ ಮತ್ತು ಕರಡಕಲ್, ಗುರುಮಠಕಲ್ ತಾಲೂಕಿನ ಅನಪುರ ಗ್ರಾಪಂ ಅವಧಿ ಪೂರ್ಣಗೊಳ್ಳದ ಕಾರಣ ಈ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿಲ್ಲ. ಉಳಿದಂತೆ ಎಲ್ಲೆಡೆ ಪೊಲೀಸ್ ಸರ್ಪಗಾವಲಿನಲ್ಲಿ ಎಲೆಕ್ಷನ್ ಪ್ರಕ್ರಿಯೆ ನಡೆಯಿತು.