

ಸಿರಿಗೇರಿ: ಶಾನವಾಸಪುರ ಗ್ರಾಪಂ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಪಿಡಿಒ ವೀರೇಶ್ ಮಾತನಾಡಿ, ಅಂಬೇಡ್ಕರ್ ಅವರು ಒಂದು ಸಮುದಾಯಕ್ಕೆ ಸೀಮಿತರಲ್ಲ. ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ ಸಮಾನತೆ ಸಾರುವ ಸಲುವಾಗಿ ಸಂವಿಧಾನ ರಚಿಸಿ ಪ್ರಜಾಪ್ರಭುತ್ವ ಎತ್ತಿ ಹಿಡಿದಿದ್ದಾರೆ. ಈ ಮೂಲಕ ಇಡೀ ವಿಶ್ವದ ಗಮನ ಸೆಳೆದರು. ಇಂತಹ ಮಹಾನ್ ಸಾಧಕರ ಜಯಂತಿ ಆಚರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಗ್ರಾ.ಪಂ. ಅಧ್ಯಕ್ಷೆ ಈರಮ್ಮ ದೊಡ್ಡ ಸಿದ್ದಪ್ಪ, ಉಪಾಧ್ಯಕ್ಷೆ ಗೌರಮ್ಮ ಈರಪ್ಪ, ಸದಸ್ಯರಾದ ಯತ್ನಟ್ಟಿ ಹೊನ್ನೂರಪ್ಪ, ಮಂಜುನಾಥಗೌಡ, ಶಂಕ್ರಮ್ಮ, ದುರ್ಗಪ್ಪ, ಕೆ.ದುರ್ಗಣ್ಣ, ಸಿಬ್ಬಂದಿ ಇದ್ದರು.