ಒಂದು ಲಕ್ಷದವರೆಗಿನ ಆಕ್ಸಿಡೆಂಟ್ ವಿಕ್ಟಮ್ಸ್ ವಿಮಾ ಯೋಜನೆ

ಒಂದು ಲಕ್ಷದವರೆಗಿನ ಆಕ್ಸಿಡೆಂಟ್ ವಿಕ್ಟಮ್ಸ್ ವಿಮಾ ಯೋಜನೆ
Published on

ಹಾಸನ: ಅಪಘಾತದ ಗಾಯಾಳುವಿಗೆ ತಕ್ಷಣದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಒಂದು ಲಕ್ಷ ದವರೆಗೂ ರಾಜ್ಯ ಸರ್ಕಾರದ ವತಿಯಿಂದ ಹೊಸದಾಗಿ ಜಾರಿಗೆ ತರಲಾಗಿರುವ ವಿಮಾ ಯೋಜನೆ ಸೌಲಭ್ಯ ಸಿಗಲಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಅಬ್ದುಲ್ ಬಷೀರ್ ತಿಳಿಸಿದರು.

ಕರ್ನಾಟಕ ಸರ್ಕಾರವು ರಸ್ತೆ ಅಪಘಾತದ ಗಾಯಾಳುಗಳಿಗೆ ತಕ್ಷಣ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಸೌಲಭ್ಯ ಸಿಗುವಂತೆ ಮಾಡಲು ಒಂದು ಲಕ್ಷದವರೆಗಿನ ಆಕ್ಸಿಡೆಂಟ್ ವಿಕ್ಟಮ್ಸ್ ವಿಮಾ ಯೋಜನೆಯನ್ನು ಜಾರಿಗೊಳಿಸಿದೆ ಎಂದು ಶುಕ್ರವಾರ ಸುದ್ದಿಗೋಸ್ಠಿಯಲ್ಲಿ ತಿಳಿಸಿದರು.

ಈ ಹಿಂದೆ ಇದ್ದ ಯಶಸ್ವಿನಿ ಅರೋಗ್ಯ ವಿಮಾ ಯೋಜನೆಯು ಕೂಡ ಖಾಸಗಿ ವಲಯದಲ್ಲಿ ಸೌಲಭ್ಯಸಿಗುವಂತೆ ಮಾಡಿದೆ. ಅದಕ್ಕಾಗಿ ಭಾರತೀಯ ವೈದ್ಯಕೀಯ ಸಂಘ ಹಾಸನ ಜಿಲ್ಲೆ ಹಾಗೂ ಖಾಸಗಿ ನರ್ಸಿಂಗ್ ಹೋಂ ಗಳ ಸಂಘ ಹಾಸನ ಜಿಲ್ಲೆ ಒಕ್ಕೂಟವು ಕರ್ನಾಟಕ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತದೆ ಎಂದರು.

ಆಕ್ಸಿಡೆಂಟ್ ವಿಕ್ಟಮ್ಸ್ ಯೋಜನೆ ಅಡಿಯಲ್ಲಿ ಭಾರತ ದೇಶದ ಯಾವುದೇ ಪ್ರಜೆಯೂ ನಮ್ಮ ರಾಜ್ಯದ ಯಾವುದೇ ಭಾಗದಲ್ಲಿ ರಸ್ತೆ ಅಪಘಾತವಾದ ಗಾಯಾಳುವಿಗೆ ತಕ್ಷಣವೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು. ಈ ಚಿಕಿತ್ಸೆಯು ಒಂದು ಲಕ್ಷದವರೆಗೂ ಗಾಯಾಳುವಿನ ಗಾಯಕ್ಕೆ ಅನುಗುಣವಾಗಿ ಇರುತ್ತದೆ ಎಂದರು.

ಯಶಸ್ವಿನಿ ವಿಮಾ ಯೋಜನೆಯು ಇನ್ನೊಂದು ಅರೋಗ್ಯ ವಿಮಾ ಯೋಜನೆಯಾಗಿದ್ದು, ಇದು ಎಲ್ಲಾ ರೀತಿಯ ಖಾಯಿಲೆಗಳಿಗೆ ಅನ್ವಯಾಗಿರುತ್ತದೆ. ಇದನ್ನು ರಾಜ್ಯದ ಸಹಕಾರಿ ಸಂಘದ ಸದಸ್ಯರು ಮತ್ತು ಕುಟುಂಬದವರಿಗೆ ಅನ್ವಯವಾಗಿರುತ್ತದೆ. ಸಾರ್ವಜನಿಕರು ತಮ್ಮ ಪ್ರದೇಶದ ಯಾವುದೇ ಸಹಕಾರಿ ಸಂಘಗಳಲ್ಲಿ ಸದಸ್ಯರಾಗಿ ಈ ವಿಮಾ ಯೋಜನೆಯನ್ನು ನೋಂದಾಯಿಸಿಕೊಳ್ಳಬೇಕಾಗಿ ಮನವಿ ಮಾಡಿದರು.

ಖಾಸಗಿ ನರ್ಸಿಂಗ್ ಹೋಂಗಳ ಸಂಘದ ಅಧ್ಯಕ ಡಾ. ಯತೀಶ್, ಕಾರ್ಯದರ್ಶಿ ಬಸವರಾಜು, ಭಾರತೀಯ ವೈದ್ಯಕೀಯ ಸಂಘದ
ಖಜಾಂಚಿ ರಾಕೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net