ಒಂದು ಲಕ್ಷ ಜನರಿಗೆ ಅನ್ನದಾಸೋಹ ಸಂಕಲ್ಪ

1105Klb14
Published on

ಕಲಬುರಗಿ: ನಗರದ ವಿವಿಧೆಡೆ ಬಡ, ನಿರ್ಗತಿಕ 75000 ಜನರಿಗೆ ಅನ್ನದಾಸೋಹ ಮಾಡುತ್ತ ಅಮೋಘ ಸೇವೆ ಸಲ್ಲಿಸುತ್ತಿರುವ ಖ್ಯಾತ ಉದ್ಯಮಿ ಸಂಜೀವ ಗುಪ್ತಾ ಅವರು ಇನ್ನೂ 25 ಸಾವಿರ ಜನರಿಗೆ ಊಟ ಕೊಡಲು ಮುಂದಾಗಿದ್ದಾರೆ.
ಸಂಜೀವ ಗುಪ್ತಾ, ಮಂಜುಳಾ ಗುಪ್ತಾ, ಭರತ ಗುಪ್ತಾ, ಭಾಗವತ (ಮಾನಸ) ಗುಪ್ತಾ, ರಾಹುಲ್ ಬೆಜಗಂ ಅವರು ದಿನನಿತ್ಯ ಬಡವರು ಮತ್ತು ನಿರ್ಗಕತಿಕರಿಗೆ ಅನ್ನ ಸಂತರ್ಪಣೆ ಮಾಡುತ್ತ ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ.
ಜಿಲ್ಲಾಡಳಿತದ ಆಹಾರ ಕಮಿಟಿ ನಿರ್ವಹಣೆಯಲ್ಲಿ ಸುಮಾರು 2500 ಜನರಿಗೆ ಪ್ರತಿದಿನದಂತೆ ಈವರೆಗೆ 75000 ಜನರ ಊಟದ ವ್ಯವಸ್ಥೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳ ಮನವಿಗೆ ಓಗೊಟ್ಟು ಲಾಕ್ಡೌನ್ ಮುಗಿಯುವವರೆಗೆ ಊಟದ ಸೇವೆ ಮುಂದುವರಿಸಲು ಒಪ್ಪಿಗೆ ಸೂಚಿಸಿದ್ದಾರೆ ಸಂಜೀವ ಗುಪ್ತಾ. ಪ್ರತಿದಿನ 25000 ರೂ. ವೆಚ್ಚದಲ್ಲಿ 2500 ಆಹಾರ ಪ್ಯಾಕೇಟ್ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net