

ಸವದತ್ತಿ: ಒಂದಾದರೂ ಸಸಿ ನೆಡುವ ಮೂಲಕ ಜನ್ಮದಿನ ಆಚರಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಹೇಳಿದರು.
ಪಟ್ಟಣದ ಯಡ್ರಾವಿ ಬಳಿ ಆದರ್ಶ ವಿದ್ಯಾಲಯದಲ್ಲಿ ವೃ ಕ್ರಾಂತಿ, ವರದ ಶ್ರೀ ೌಂಡೇಷನ್, ಶರಣ ಸಂಗಮ ಹಾಗೂ ಸವದತ್ತಿಯ ವಿವಿಧ ಸಂಟನೆಗಳಿಂದ ಸೋಮವಾರ ಹಮ್ಮಿಕೊಂಡಿದ್ದ ಶತಕೋಟಿ ಬೀಜ ಬಿತ್ತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೋವಿಡ್ ಸಮಯದಲ್ಲಿ ಆಕ್ಸಿಜನ್ ಕೊರತೆ, ಭಯದ ವಾತಾವರಣದಿಂದ ಸಾಕಷ್ಟು ಸ್ನೇಹಿತ, ಸಂಬಂಧಿಕರನ್ನು ಕಳೆದುಕೊಂಡಿದ್ದೇವೆ. ಕರೊನಾ ಮಹಾಮಾರಿ ನಮಗೆ ಪರಿಸರದ ಸಂರಣೆಯ ಮಹತ್ವ ತಿಳಿಸಿದೆ. ಪ್ರತಿಯೊಬ್ಬರೂ ಒಂದಾದರೂ ಸಸಿ ನೆಡಬೇಕು. ಆತ್ಮವಿಶ್ವಾಸ, ಕಠಿಣ ಪರಿಶ್ರಮ, ಶ್ರದ್ಧೆಯಿಂದ ವಿದ್ಯಾರ್ಥಿಗಳು ಸಾಧನೆ ಮಾಡಬಹುದು ಎಂದರು.
ೇತ್ರ ಶಿಣಾಧಿಕಾರಿ ಮೋಹನ ದಂಡಿನ ಮಾತನಾಡಿ, ಪರಿಸರ ನಾಶದಿಂದ ನೈಸರ್ಗಿಕ ಋತು ಚಕ್ರದಲ್ಲಿ ವ್ಯತ್ಯಾಸವಾಗಿದ್ದು, ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದು ಎಂದರು.
ವಕೀಲ ರಾಜಶೇಖರ ನಿಡವಣಿ ಮಾತನಾಡಿ, ಜಾಗತಿಕ ತಾಪಮಾನ ಹೆಚ್ಚಾಗಲು ಪರಿಸರ ನಾಶವೇ ಕಾರಣ. ಹೀಗಾಗಿ ಸರ್ಕಾರ ಸಸಿ ನೆಡುವ ಕಾರ್ಯಕ್ರಮ ರೂಪಿಸುತ್ತಿದೆ. ಶಾಲೆ, ವಿದ್ಯಾಲಯಗಳಲ್ಲಿ ವೃ ಜೋಳಿಗೆ ಪ್ರಾರಂಭಿಸಿ ಬೀಜ ಸಂರಸುವ ಕೆಲಸವಾಗಬೇಕಿದೆ ಎಂದರು. ಪಟ್ಟಣದ ವಿವಿಧ ಶಾಲೆಯ ವಿದ್ಯಾರ್ಥಿಗಳು ಬೀಜ ಬಿತ್ತೋತ್ಸವ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಅರಣ್ಯಾಧಿಕಾರಿ ಶಂಕರ ಅಂತರಗಟ್ಟಿ, ಆರ್ಎ್ಒ ಲಿಂಗರಡ್ಡಿ ಮಂಕನಿ, ತಾಲೂಕು ಆರೋಗ್ಯಾಧಿಕಾರಿ ಶ್ರೀಪಾದ ಸಬನೀಸ್, ಅರ ದಾಸೋಹ ಅಧಿಕಾರಿ ಮೈತ್ರಾದೇವಿ ವಸ್ತ್ರದ, ಆದರ್ಶ ವಿದ್ಯಾಲಯ ಮುಖ್ಯಶಿಕ ಆರ್.ಎ್. ಮಾಗಿ, ವಕೀಲರ ಸಂದ ಅಧ್ಯ ಎಂ.ಎನ್. ಮುತ್ತಿನ, ವರದ ಶ್ರೀ ೌಂಡೇಷನ್ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ, ಮುಖಂಡ ಅಲ್ಲಮಪ್ರಭು ಪ್ರಭುನವರ, ಯೋಗ ಸಂಚಾಲಕ ರಾಜು ಸುರಪುರ, ಬಸವರಾಜ ಕಪ್ಪಣ್ಣವರ ಇತರರು ಇದ್ದರು.