ಐಸಿಎಐ ಹುಬ್ಬಳ್ಳಿ ಶಾಖೆಗೆ ಆಯ್ಕೆ

akshayakumar singhi
Published on

ಹುಬ್ಬಳ್ಳಿ: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ (ಐಸಿಎಐ) ಹುಬ್ಬಳ್ಳಿ ಶಾಖೆಯ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಕ್ಷಯ ಕುಮಾರ ಸಿಂಘಿ ಹಾಗೂ ಕಾರ್ಯದರ್ಶಿಯಾಗಿ ಮಂಜುನಾಥ ಮೇಟಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಉಪಾಧ್ಯಕ್ಷರಾಗಿ ರಿಷಭ ಉಪಾಧ್ಯಾಯ, ಖಜಾಂಚಿಯಾಗಿ ಅನಂತ ನ್ಯಾಮಣ್ಣವರ್, ಸಿಕಾಸಾ (ಎಸ್​ಐಸಿಎಎಸ್​ಎ) ಅಧ್ಯಕ್ಷರಾಗಿ ಆದರ್ಶ ಹಿರೇಮಠ ಹಾಗೂ ಸದಸ್ಯರಾಗಿ ವಿರೂಪಾಕ್ಷ ಹಿಪ್ಪರಗಿ ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net