ಎಂ.ಎನ್.ಕೋಟೆ: ಗುಬ್ಬಿ ತಾಲೂಕಿನ ಕುಂಟರಾಮಹಳ್ಳಿಯ ರೈತರೊಬ್ಬರು ಸಾಲಬಾಧೆಗೆ ಬೇಸತ್ತು ವಿಷ ಕುಡಿದು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾರಯ್ಯ (70) ಮೃತ ರೈತ. ಸ್ವ&ಸಹಾಯ ಸಂ ಮತ್ತು ವಿಎಸ್ಎಸ್ಎನ್ನಲ್ಲೂ ಸಾಲ ಪಡೆದಿದ್ದು, ಕೈಸಾಲವೂ ಸೇರಿ ಸುಮಾರು 3 ಲ ಸಾಲ ಮಾಡಿ ಕೊಳವೆಬಾವಿ ಕೊರೆಸಿದ್ದರೂ ನೀರು ಸಿಕ್ಕಿರಲಿಲ್ಲ. ಮೃತರಿಗೆ ಪತ್ನಿ ಹಾಗೂ ಮೂರು ಪುತ್ರಿಯರು ಇದ್ದಾರೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.