ಐಪಿಎಸ್ ಅಧಿಕಾರಿಗಳ ಮುಸುಕಿನ ಗುದ್ದಾಟ

H6 R. Dilip
Published on

ಹುಬ್ಬಳ್ಳಿ; ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್​ನಲ್ಲಿ ಐಪಿಎಸ್ ಅಧಿಕಾರಿಗಳ ಮುಸುಕಿನ ಗುದ್ದಾಟ ನಡೆದಿದ್ದು, ಆಯುಕ್ತ ಆರ್. ದಿಲೀಪ ಅವರು ಉಪ ಆಯುಕ್ತ ಪಿ. ಕೃಷ್ಣಕಾಂತ ಅವರಿಗೆ 92 ದಿನದಿಂದ ಭೇಟಿಗೆ ಅವಕಾಶ ನೀಡದಿರುವುದು ಬಹಿರಂಗವಾಗಿದೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ಸ್ವಂತ ನಗರದಲ್ಲೇ ಹಿರಿಯ ಅಧಿಕಾರಿಯೊಬ್ಬರು ತಮ್ಮ ಅಧೀನ ಅಧಿಕಾರಿಯನ್ನು ದೂರ ಇಟ್ಟಿರುವ ವಿದ್ಯಮಾನ ನಡೆದಿದೆ.

ಈ ಗುದ್ದಾಟದ ಬಗ್ಗೆ ಬೇಸರದಿಂದಲೇ ಪ್ರತಿಕ್ರಿಯಿಸಿರುವ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರು, ಗೃಹ ಸಚಿವರ ಜತೆ ಮಾತನಾಡಿ ಸರಿಪಡಿಸುವ ಭರವಸೆ ನೀಡಿದ್ದಾರೆ.

ಪತ್ರ ಬರೆದರು: 92 ದಿನಗಳಿಂದ ಖುದ್ದು ಭೇಟಿಯಾಗಿ ರ್ಚಚಿಸಲು ಅವಕಾಶ ನೀಡಿಲ್ಲ, ಇದರಿಂದ ಮುಕ್ತವಾಗಿ ಮತ್ತು ದಕ್ಷತೆಯಿಂದ ಕೆಲಸ ಮಾಡಲು ಸಮಸ್ಯೆ ಎದುರಾಗುತ್ತಿದೆ ಎಂದು ಸ್ವತಃ ಡಿಸಿಪಿ ಪಿ. ಕೃಷ್ಣಕಾಂತ ಅವರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

ಹು- ಧಾ ಅವಳಿ ನಗರದ ಕಾನೂನು ಸುವ್ಯವಸ್ಥೆ ಬಗ್ಗೆ ಸೂಕ್ಷ್ಮ ವಿಚಾರಗಳು ಮತ್ತು ಕೋವಿಡ್ ನಿಯಂತ್ರಣ ಕುರಿತು ರ್ಚಚಿಸಲು ಅವಕಾಶ ನೀಡುವಂತೆ ತಮಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೆ. ಆದಾಗ್ಯೂ ಅವಕಾಶ ನೀಡಿಲ್ಲ. ಮುಕ್ತ ಭೇಟಿಗೆ ಅನುಮತಿ ನೀಡಿ ಎಂದು ಡಿಸಿಪಿ ಕೃಷ್ಣಕಾಂತ ಪತ್ರ ಮುಖೇನ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ.

ಸರ್ಕಾರದ ಯಾವುದೋ ಒಂದು ಅನುದಾನದ ವಿಚಾರವಾಗಿ ಇಬ್ಬರ ನಡುವೆ ಶೀತಲ ಸಮರ ಶುರುವಾಗಿದ್ದು, ಅದೇ ಕಾರಣಕ್ಕೆ ಕಮಿಷನರ್, ಡಿಸಿಪಿ ಅವರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎನ್ನಲಾಗಿದೆ. ಪತ್ರದ ಕುರಿತ ಪ್ರತಿಕ್ರಿಯೆಗೆ ಯತ್ನಿಸಿದರೂ ಪೊಲೀಸ್ ಆಯುಕ್ತರು ಸಂಪರ್ಕಕ್ಕೆ ಸಿಗಲಿಲ್ಲ.

‘ಕಚೇರಿ ಬಿಟ್ಟು ಹೊರ ಬಂದು ಕೆಲಸ ಮಾಡಿ. ವಾರದಲ್ಲಿ ಕಾನೂನು ಸುವ್ಯವಸ್ಥೆ ಸರಿಮಾಡಿ’ ಎಂದು ಇತ್ತೀಚೆಗಷ್ಟೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸ್ ಆಯುಕ್ತರಿಗೆ ಖಡಕ್ ಸೂಚನೆ ನೀಡಿದ್ದರು. ಡ್ರಗ್ಸ್ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಮುಖಂಡರು ಪೊಲೀಸ್ ಆಯುಕ್ತರ ಭೇಟಿಗೆ ನಿರಾಕರಿಸಿದಾಗ, ಆಯುಕ್ತರ ಖಾಲಿ ಕುರ್ಚಿಗೆ ಮನವಿ ಪತ್ರ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಪತ್ರದಲ್ಲಿ ಏನಿದೆ ?

ಸೂಕ್ಷ್ಮ ಪ್ರಕರಣದ ವಿಚಾರವಾಗಿ ರ್ಚಚಿಸಲೆಂದು ಅ. 3ರಂದು ಆಯುಕ್ತರ ಕಚೇರಿ ಸಿಬ್ಬಂದಿಗೆ ಕರೆ ಮಾಡಿ ತಿಳಿಸಿದ್ದೆ. ಆಗ ಮತ್ತೊಂದು ಕರೆಯಲ್ಲಿ ನಿರತರಾಗಿರುವುದಾಗಿ ತಿಳಿಸಿದ್ದರು. ನಂತರ ಮತ್ತೆ ಕರೆ ಮಾಡಿದಾಗ ಮನೆಗೆ ಹೋಗಿದ್ದಾರೆಂದು ಸಿಬ್ಬಂದಿ ತಿಳಿಸಿದ್ದರು. ನಂತರ ಆಯುಕ್ತರ ಮನೆಯ ಇಂಟರ್​ಕಾಮ್ೆ ಕರೆ ಮಾಡಿದರೆ ಭೇಟಿಗೆ ತಿರಸ್ಕರಿಸಿ, ಫೋನ್ ಕರೆಯನ್ನೂ ಕಟ್ ಮಾಡಿದ್ದಾರೆ. ಒಂದೂವರೆ ಗಂಟೆ ಕಾದು ಕುಳಿತರೂ ಭೇಟಿಗೆ ಅನುಮತಿ ನೀಡಲಿಲ್ಲ. 2230 ಗಂಟೆಯಿಂದ ಭೇಟಿಗೆ ಅವಕಾಶ ನೀಡುತ್ತಿಲ್ಲ; ಈಗಲಾದರೂ ಅವಕಾಶ ನೀಡಿ ಎಂದು ಡಿಸಿಪಿ ಕೃಷ್ಣಕಾಂತ ಕಂಟ್ರೋಲ್ ರೂಂ ಮುಖಾಂತರ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಆ ಪತ್ರವನ್ನು ಐಜಿಪಿಗೂ ರವಾನಿಸಿದ್ದಾರೆ.

ಕೋವಿಡ್-19 ನಿಯಂತ್ರಣದ ಸಲುವಾಗಿ ಡಿಸಿಪಿ ಕೃಷ್ಣಕಾಂತ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಕಾನೂನು ಸುವ್ಯವಸ್ಥೆ ಡಿಸಿಪಿಯಾದ್ದರಿಂದ ಸೂಕ್ಷ್ಮ ವಿಚಾರಗಳ ಕುರಿತು ರ್ಚಚಿಸಲು ಅನುಮತಿ ಕೇಳಿದರೂ ನೀಡಿಲ್ಲ. ಹಾಗಾಗಿ, ಮುಕ್ತವಾಗಿ ಭೇಟಿ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.

ಐಪಿಎಸ್ ಅಧಿಕಾರಿಗಳ ಶೀತಲ ಸಮರ ವಿಚಾರ ಗೊತ್ತಾಗಿದೆ. ಇಂತಹ ಘಟನೆಗಳು ಪದೇಪದೆ ಮರುಕಳಿಸುತ್ತಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಹಾಗಾಗಿ, ಇಬ್ಬರೂ ಅಧಿಕಾರಿಗಳು ಮತ್ತು ಗೃಹ ಸಚಿವರ ಜತೆ ಮಾತನಾಡಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ. | ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವ

==========

ಫೋಟೊ 6 ವಿಕ್ರಂ 3

ಧಾರವಾಡ, ಜಾನುವಾರು ಮಾರುಕಟ್ಟೆ, ಸಂತೆ, ಆದೇಶಕ್ಕಿಲ್ಲ ಕಿಮ್ಮತ್ತು

ಜಿಲ್ಲಾಧಿಕಾರಿ ಆದೇಶಕ್ಕಿಲ್ಲ ಕಿಮ್ಮತ್ತು

ಧಾರವಾಡ: ಜಿಲ್ಲೆಯ ಜಾನುವಾರುಗಳಲ್ಲಿ ಚರ್ಮ ಗಂಟು ರೋಗ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯಲ್ಲಿ ಜಾನುವಾರು ಸಂತೆ, ಜಾತ್ರೆ ಹಾಗೂ ಸಾಗಣೆಗೆ ನಿಷೇಧ ಹೇರಲಾಗಿದೆ. ಆದಾಗ್ಯೂ ನಗರದ ಜಾನುವಾರು ಮಾರುಕಟ್ಟೆಯಲ್ಲಿ ಮಂಗಳವಾರ ಸಂತೆ ನಡೆಸುವ ಮೂಲಕ ಜಿಲ್ಲಾಧಿಕಾರಿ ಆದೇಶವನ್ನೇ ಉಲ್ಲಂಘಿಸಲಾಗಿದೆ.

ಚರ್ಮ ಗಂಟು ರೋಗ ಹರಡುವಿಕೆ ತಡೆಗಟ್ಟಲು ಸೆ. 28ರಿಂದ ಜಾನುವಾರು ಸಂತೆ, ಜಾತ್ರೆ ಮತ್ತು ಜಾನುವಾರು ಸಾಗಾಣಿಕೆಗೆ ಪ್ರತಿಬಂಧಕಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶಿಸಿದ್ದರು. ಈ ಆದೇಶದ ಪ್ರತಿಯನ್ನು ಎಪಿಎಂಸಿ ಕಚೇರಿ ಆವರಣಗಳಲ್ಲಿ ಸಹ ಅಂಟಿಸಲಾಗಿದೆ.

ಚರ್ಮ ಗಂಟು ರೋಗ ಒಂದು ಜಾನುವಾರಿನಿಂದ ಇನ್ನೊಂದು ಜಾನುವಾರಿಗೆ ಹರಡುತ್ತದೆ. ಇದೇ ಕಾರಣಕ್ಕೆ ಸಂತೆ, ಜಾತ್ರೆ ಹಾಗೂ ಸಾಗಾಣಿಕೆ ತಡೆಯುವಂತೆ ಆದೇಶಿಸಲಾಗಿದೆ. ಆದರೆ ಎಪಿಎಂಸಿ ಅಧಿಕಾರಿಗಳು ಜಿಲ್ಲಾಧಿಕಾರಿ ಆದೇಶವನ್ನು ರೈತರಿಗೆ ಸರಿಯಾಗಿ ತಲುಪಿಸದ ಹಿನ್ನೆಲೆಯಲ್ಲಿ ಈ ಎಡವಟ್ಟು ನಡೆದಿದೆ ಎನ್ನಲಾಗಿದೆ.

ಈಗಾಗಲೇ ಕರೊನಾ ಹಾವಳಿ ತಡೆಯಲು ಪರಸ್ಪರ ಅಂತರ ಸೇರಿ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಈ ಸಂತೆಯಲ್ಲಿ ಯಾವುದೇ ಅಂತರವೂ ಕಾಣಲಿಲ್ಲ. ಇಂತಹ ಸಂದರ್ಭದಲ್ಲಿ ಜನರಿಗೆ ಕರೊನಾ ಹಾಗೂ ಜಾನುವಾರುಗಳಿಗೆ ಚರ್ಮ ಗಂಟು ರೋಗ ಹರಡುವಿಕೆಯಲ್ಲಿ ಯಾವುದೇ ಸಂದೇಹವಿಲ್ಲ ಎಂಬಂತೆ ಕಾಣುತಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿದ ಎಪಿಎಂಸಿ ಕಾರ್ಯದರ್ಶಿ ವಿ.ಜಿ. ಹಿರೇಮಠ, ಈ ಮಾಹಿತಿ ತಿಳಿಯದ ಕೆಲವರು ಸಂತೆಗೆ ಆಗಮಿಸಿದ್ದರು. ಬಳಿಕ ಧ್ವನಿವರ್ಧಕ ಮೂಲಕ ಅವರಿಗೆ ಮಾಹಿತಿ ನೀಡಲಾಗಿದೆ. ಪ್ರತಿ ಗಾಮಗಳಲ್ಲಿ ಡಂಗೂರ ಸಾರುವ ಮೂಲಕ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

====

ಫೋಟೊ: ಎಚ್6 ಎಪಿಎಂಸಿ ಕಳ್ಳರು

==========

ಇಬ್ಬರು ಮನೆಗಳ್ಳರ ಬಂಧನ

ಹುಬ್ಬಳ್ಳಿ: ಮನೆಗಳಲ್ಲಿ ಕಳವು ಮಾಡುತ್ತಿದ್ದ ಇಬ್ಬರು ಸಹೋದರರನ್ನು ಎಪಿಎಂಸಿ- ನವನಗರ ಠಾಣೆ ಪೊಲೀಸರು ಬಂಧಿಸಿ, ಅವರಿಂದ 6,35,800 ರೂ. ಮೌಲ್ಯದ 158 ಗ್ರಾಂ ಚಿನ್ನಾಭರಣ ಮತ್ತು 95 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಹೊಸೂರು ವೀರಮಾರುತಿ ನಗರ ನಿವಾಸಿಗಳಾದ ದ್ಯಾಮಣ್ಣ ಭೀಮಸಿ ಕ್ವಾಟಿ ಏಳುಕೋಟಿ (30) ಹಾಗೂ ನಾಗರಾಜ ಭೀಮಸಿ ಕ್ವಾಟಿ ಏಳುಕೋಟಿ (25) ಬಂಧಿತರು. ಬಂಧಿತರ ವಿರುದ್ಧ ಭೈರಿದೇವರಕೊಪ್ಪ ಹಾಗೂ ಸಂಗೊಳ್ಳಿ ರಾಯಣ್ಣ ನಗರದಲ್ಲಿ ಎರಡು ಮನೆಗಳ್ಳತನ ಪ್ರಕರಣ ದಾಖಲಾಗಿದ್ದವು.

ಇನ್ಸ್​ಪೆಕ್ಟರ್ ಪ್ರಭು ಸೂರಿನ್ ನೇತೃತ್ವದ ತಂಡ ಆರೋಪಿಗಳನ್ನು ಕೊಪ್ಪಿಕರ ರಸ್ತೆಯಲ್ಲಿ ಬಂಧಿಸಿದೆ. ಪಿಎಸ್​ಐ ಎಸ್.ಎಸ್. ಜಕ್ಕನಗೌಡ್ರ, ಸಿಬ್ಬಂದಿ ಎನ್.ಎಚ್. ಗುಡಿಮನಿ, ಆರ್.ಎ. ಸವಾರ, ಎಂ.ಜೆ. ರಕ್ಕಸಗಿ, ಕುಬೇರ ಕಾರಭಾರಿ, ಎಸ್.ಎಂ. ದಿಡ್ಡಿ, ಬಿ.ಎನ್. ರಾಠೋಡ, ವಿ.ಬಿ. ಪಾಟೀಲ ತಂಡದಲ್ಲಿದ್ದರು. ಈ ತಂಡಕ್ಕೆ ಪೊಲೀಸ್ ಆಯುಕ್ತರು ಬಹುಮಾನ ಘೊಷಿಸಿದ್ದಾರೆ.

ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ ಬಂಧನ

ಧಾರವಾಡ: ಯುವಕನೊಬ್ಬ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಾಲೂಕಿನ ಮರೇವಾಡ ಗ್ರಾಮದಲ್ಲಿ ಸೋಮವಾರ ನಡೆದಿದೆ. ಗ್ರಾಮದ ಹುಸೇನಸಾಬ ಮರ್ದಾನಸಾಬ ಬಾಳಣ್ಣವರ (23) ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಸಂಜೆ ಬಹಿರ್ದೆಸೆಗೆ ತೆರಳುತ್ತಿದ್ದ 8 ವರ್ಷದ ಬಾಲಕಿಯನ್ನು ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ. ಆಗ ಬಾಲಕಿ ಕೂಗಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಆಗಮಿಸಿ ಹುಸೇನಸಾಬನನ್ನು ಹಿಡಿದು ಥಳಿಸಿದ್ದಾರೆ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಗೆ ನುಗ್ಗಿ 3 ಮೊಬೈಲ್ ಕಳವು

ಹಿಂಬಾಗಿಲಿನಿಂದ ಮನೆ ಪ್ರವೇಶಿಸಿ ಮನೆಯಲ್ಲಿದ್ದ 42,000 ರೂ. ಮೌಲ್ಯದ ಮೂರು ಮೊಬೈಲ್​ಗಳನ್ನು ಕದ್ದು ಪರಾರಿಯಾಗಿರುವ ಘಟನೆ ಇಲ್ಲಿನ ಭೈರಿದೇವರಕೊಪ್ಪ ಸಂಗೊಳ್ಳಿರಾಯಣ್ಣ ನಗರ ನಿಸರ್ಗ ಲೇಔಟ್​ನಲ್ಲಿ ಇತ್ತೀಚೆಗೆ ನಡೆದಿದೆ. ಕುಟುಂಬದ ಸದಸ್ಯರು ಯಾವುದೋ ಕೆಲಸದಲ್ಲಿ ನಿರತರಾಗಿದ್ದ ವೇಳೆ ಹಿಂಬಾಗಿಲಿನಿಂದ ಬಂದು ಮೊಬೈಲ್ ಕದ್ದು ಪರಾರಿಯಾಗಿದ್ದಾರೆ. ಎಪಿಎಂಸಿ- ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡು ದ್ವಿಚಕ್ರ ವಾಹನ ಕಳವು

ಹುಬ್ಬಳ್ಳಿ: ಇಲ್ಲಿನ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಕಡೆ ಎರಡು ದ್ವಿಚಕ್ರ ವಾಹನ ಕಳವಾಗಿರುವ ಕುರಿತು ಪ್ರತ್ಯೇಕ ಪ್ರಕರ ಣ ದಾಖಲಾಗಿವೆ. ಮನೆ ಎದುರು ಪಾರ್ಕ್ ಬಳಿ ಹ್ಯಾಂಡಲ್ ಲಾಕ್ ಮಾಡಿ ನಿಲ್ಲಿಸಿದ್ದ 2 ಸ್ಪೆ್ಲಂಡರ್ ಬೈಕ್​ಗಳು ಕಳವಾಗಿವೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net