ಐಪಿಎಲ್ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಮೂವರ ಬಂಧನ

Arrest Kaidhi
Published on

ಮುಳಗುಂದ: ಐಪಿಎಲ್ ಬೆಟ್ಟಿಂಗ್​ನಲ್ಲಿ ತೊಡಗಿಕೊಂಡಿದ್ದ ಮೂವರನ್ನು ಮುಳಗುಂದ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಪಟ್ಟಣದ ಬಂಡಿ ಓಣಿಯ ಶರಣಪ್ಪ ನೀಲಪ್ಪ ಮಳ್ಳಿ (28), ಪ್ರದೀಪ ಉರ್ಫ್ ಬಸವರಾಜ ಕರಿಯಪ್ಪ ಭಜಂತ್ರಿ (23), ಸವಳಬಾವಿ ಓಣಿಯ ನಜೀರ್ ಅಹ್ಮದ್ ಅಬ್ದುಲ್ ಕರೀಂಸಾಬ್ ಡಾಲಾಯತ (39) ಬಂಧಿತರು. ವಿದ್ಯಾನಗರದ ನಿವಾಸಿ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಬಸವರಾಜ ಶಿವನಪ್ಪ ಹಾರೋಗೇರಿ ಪರಾರಿಯಾಗಿದ್ದಾರೆ. ಪಟ್ಟಣದ ವಿದ್ಯಾನಗರ ಹತ್ತಿರದ ಶ್ರೀ ಬಾಲಲೀಲಾ ಮಹಾಂತ ಶಿವಯೋಗಿ ಕಲಾಭವನದ ಬಳಿ ಜನರಿಂದ ಹಣ ಕಟ್ಟಿಸಿಕೊಳ್ಳುವಾಗ ಸಿಕ್ಕು ಬಿದ್ದಿದ್ದಾರೆ. ಬಂಧಿತರಿಂದ 10,500 ರೂಪಾಯಿ, ಅಂಕಿ-ಸಂಖ್ಯೆ ಬರೆದುಕೊಂಡಿದ್ದ 3 ಚೀಟಿಗಳು, ಎರಡು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.

ಬೆಟಗೇರಿಯಲ್ಲಿ ಮೂವರ ಸೆರೆ

ಗದಗ: ಬೆಟಗೇರಿಯ ಮೈಲಾರ ದೇವಸ್ಥಾನ ಬಳಿಯ ಬಯಲು ಜಾಗೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ತೊಡಗಿದ್ದ ಮೂವರು ಆರೋಪಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಭಾನುವಾರ ದೆಹಲಿಯ ಪಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಜರುಗಿದ ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳ ನಡುವಿನ ಐಪಿಎಲ್ ಪಂದ್ಯದ ಮೇಲೆ ಬೆಟ್ಟಿಂಗ್ ಆಡುತ್ತಿದ್ದ ಬೆಟಗೇರಿಯ ಸಾಗರ ರಾಜಾರಾಂ ಗುಜ್ಜರ, ಶಹಪೂರಪೇಟೆಯ ವೀರೇಂದ್ರ ಈರಣ್ಣ ಬಾಳಿಗೇರಿ ಹಾಗೂ ಶ್ರೀಕಾಂತ ಹನುಮಂತಪ್ಪ ಗಣಪಾ ಅವರನ್ನು ಬಂಧಿಸಲಾಗಿದೆ. ವಿರುದ್ಧ ಬೆಟಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

8 ಜೂಜುಕೋರರು ಅರೆಸ್ಟ್

ಗದಗ: ಸ್ಥಳೀಯ ಬೆಟಗೇರಿ ಹೊರವಲಯದ ಗದ್ದಿಹಳ್ಳಿದ ಬಳಿ ಜೂಜಾಡುತ್ತಿದ್ದ ಆಡುತ್ತಿದ್ದ 8 ಜನರ ವಿರುದ್ಧ ಸೋಮವಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸುರೇಶ ಗಿಡಮಲ್ಲಣ್ಣವರ, ಅಪ್ಪಾಸಾಬ ನದಾಫ್, ಭಾಸ್ಕರ ಮೇರವಾಡೆ, ವಿನೋದ ಬಾಕಳೆ, ಬಸವರಾಜ ಗಿರಿಮಠ, ರಮೇಶ ತಾಳಿಕೋಟಿ, ಶಿವಾನಂದ ಕರಿಗೌಡ್ರ, ಅಜರುದ್ದೀನ್ ಮಕಾನದಾರ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಟಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net