ಐದರ ಪೋರಿಯ ವರ್ಲ್ಡ್ ರೆಕಾರ್ಡ್

17kdl1
Published on

ಮಂಜುನಾಥ ಶಿವಕ್ಕನವರ ಕುಂದಗೋಳ

ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗಿಲ್ಲ. ಈ ಸಮಯದಲ್ಲಿ ಬಹುತೇಕ ಮಕ್ಕಳು ಓದುವುದನ್ನು ಬಿಟ್ಟು ಆಟೋಟಗಳಲ್ಲಿ ಮಗ್ನರಾಗಿದ್ದೇ ಹೆಚ್ಚು. ಆದರೆ, ಪಟ್ಟಣದ ಐದು ವರ್ಷದ ಬಾಲೆಯೊಬ್ಬಳು ಭಾರತ ಇತಿಹಾಸ, ಪರಂಪರೆ, ಸಾಮಾನ್ಯ ಜ್ಞಾನದ ಆನ್​ಲೈನ್ ಸ್ಪರ್ಧೆಯಲ್ಲಿ ಸಾಧನೆಗೈದು ವರ್ಲ್ಡ್ ರೆಕಾರ್ಡ್ ಪುಸ್ತಕದಲ್ಲಿ ಹೆಸರು ದಾಖಲಿಸಿದ್ದಾಳೆ.

ಪಟ್ಟಣದ ಸನ್ ಶೈನ್ ಆಂಗ್ಲ ಮಾಧ್ಯಮ ಶಾಲೆ ಯುಕೆಜಿ ವಿದ್ಯಾರ್ಥಿನಿ ಶ್ರೀಶಾ ಈಶ್ವರ ಮುದಗೊಣ್ಣವರ ಸಾಧನೆಗೈದವಳು.

5 ವರ್ಷದ ಶ್ರೀಶಾ ರಾಜ್ಯದ ಎಲ್ಲ ತಾಲೂಕುಗಳು, ಮುಖ್ಯಮಂತ್ರಿಗಳ ಹೆಸರು, ದೇಶ-ವಿದೇಶ, ಅಂತಾರಾಷ್ಟ್ರೀಯ, ಕಲೆ, ಸಾಹಿತ್ಯ, ಕ್ರೀಡೆ, ವೇದಗಳು, ಸನಾತನ ಧರ್ಮ, ಪುರಾಣಗಳು, ವಚನ, ಅಂಕಿತ ನಾಮಗಳು, ಕೇಂದ್ರಾಡಳಿತ ಪ್ರದೇಶಗಳು, ಬ್ರಿಟಿಷರು, ಕದಂಬರು, ಮೌರ್ಯರು, ಶಾತವಾಹನರು, ಹೊಯ್ಸಳರ ಕುರಿತ ಯಾವುದೇ ಪ್ರಶ್ನೆಗಳಿರಲಿ ಥಟ್ ಅಂತ ಉತ್ತರ ನೀಡುತ್ತಾಳೆ.

ತಂದೆ ಈಶ್ವರ ಹಾಗೂ ತಾಯಿ ಅರುಣ ಅವರು ಮಗಳಿಗೆ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ಕನ್ನಡ ಭಾಷೆಯಲ್ಲಿ ನಿತ್ಯ ಕಂಠಪಾಠ ಮಾಡಿಸುತ್ತಾರೆ. ಮಗಳ ಹೆಸರನ್ನು ವರ್ಲ್ಡ್ ರೆಕಾರ್ಡ್ ಬುಕ್​ನಲ್ಲಿ ದಾಖಲಿಸಲು

ವರ್ಲ್ಡ್ ರೆಕಾರ್ಡ್ ವೆಬ್​ಸೈಟ್​ನಲ್ಲಿ ಸಾಮಾನ್ಯ ಜ್ಞಾನ ಸ್ಪರ್ಧೆ ಆಯ್ಕೆ ಮಾಡಿಕೊಂಡರು. ಅಲ್ಲಿ ಕೇಳುವ ಪ್ರಶ್ನೆಗಳಿಗೆ ಶ್ರೀಶಾ ಸಮರ್ಥವಾಗಿ ಉತ್ತರ ನೀಡಿದ ವಿಡಿಯೋವನ್ನು ಅಪ್​ಲೋಡ್ ಮಾಡಿದರು. ಸ್ಪರ್ಧೆಯಲ್ಲಿ ಶ್ರೀಶಾ ಈಶ್ವರ ಮುದಗೊಣ್ಣವರ ಆಯ್ಕೆಯಾಗಿ ವರ್ಲ್ಡ್ ರೆಕಾರ್ಡ್ ಪುಸ್ತಕದಲ್ಲಿ ಹೆಸರು ದಾಖಲಾಯಿತು. 2020 ವರ್ಲ್ಡ್ ರೆಕಾರ್ಡ್ ಪ್ರಶಸ್ತಿಗೆ ಭಾಜನಳಾದಳು. ಕೋವಿಡ್ ಹಿನ್ನೆಲೆಯಲ್ಲಿ ಪ್ರಶಸ್ತಿ ಪತ್ರವನ್ನು ಕೋರಿಯರ್ ಮೂಲಕ ನ. 10ರಂದು ಶ್ರೀಶಾ ಮನೆಗೆ ಕಳುಹಿಸಲಾಗಿದೆ. ಈಕೆ 2020 ಫೆಬ್ರವರಿಯಲ್ಲಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಾಧನೆ ಮಾಡಿದ್ದಾಳೆ.

ಅಪ್ಪ-ಅಮ್ಮ ಮುಂಜಾನೆ, ಸಂಜೆ, ಮನೆಯಲ್ಲಿ ಭಾರತದ ಇತಿಹಾಸ, ದೇಶಕ್ಕೆ ಸಂಬಂಧಿಸಿದ ಜನರಲ್ ನಾಲೆಜ್ ಬಗ್ಗೆ ಕನ್ನಡದಲ್ಲಿ ಓದಿಸುತ್ತಾರೆ.| ಶ್ರೀಶಾ ಮುದಗೊಣ್ಣವರ, ವಿದ್ಯಾರ್ಥಿನಿಕನ್ನಡ ಭಾಷೆ ಶಕ್ತಿ, ಭಾರತೀಯ ಇತಿಹಾಸ, ಪರಂಪರೆ ಮೂಲಕ ಮಗಳಿಗೆ ವಿವರಿಸಲಾಗಿತ್ತು. ಗಿನ್ನೆಸ್ ದಾಖಲೆ ಮಾಡುವ ಮೂಲಕ ಮಾತೃಭಾಷೆಗೆ ಇರುವ ಶಕ್ತಿ ತೋರಿಸಿದ್ದಾಳೆ.| ಅರುಣ ಮುದಗೊಣ್ಣವರ, ತಾಯಿನಮ್ಮ ಶಾಲೆ ಕೀರ್ತಿ, ತಾಲೂಕಿನ ಹೆಮ್ಮೆಯ ಬಾಲೆ ಶ್ರೀಶಾ. ಇತರರ ಮಕ್ಕಳಿಗೆ ಆದರ್ಶಪ್ರಾಯಳಾಗಿದ್ದಾಳೆ.| ಬಸವರಾಜ ಕೊಪ್ಪದ ಕುಂದಗೋಳ, ಸನ್ ಶೈನ್ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net