ಐತಿಹಾಸಿಕ ಸಮಾರಂಭ ಯಶಸ್ಸಿಗೆ ಎಲ್ಲರ ಸಾಥ್ ಅಗತ್ಯ

klb1
ಸೇಡಂನಲ್ಲಿ ಭಾರತೀಯ ಸಂಸ್ಕೃತಿ ಉತ್ಸವ-7 ಹಾಗೂ ಕೊತ್ತಲ ಸ್ವರ್ಣ ಕರ‍್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನೊಣವಿನಕೆರೆಯ ಶ್ರೀ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಬಿಡುಗಡೆಗೊಳಿದರು. ಶ್ರೀ ಶಿವಶಂಕರ ಶಿವಾಚಾರ್ಯ, ಶ್ರೀ ಪಂಚಾಕ್ಷರ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಕೆ.ಎನ್ ಗೋವಿಂದಾಚಾರ್ಯ, ಡಾ.ಬಸವರಾಜ ಪಾಟೀಲ್ ಸೇಡಂ, ರಾಜಕುಮಾರ ಪಾಟೀಲ್ ತೆಲ್ಕೂರ ಇದ್ದರು.
Published on

ಸೇಡಂ: ಯಾವುದೇ ಯಶಸ್ವಿ ಕಾರ್ಯ ಒಬ್ಬರಿಂದ ಮಾಡಲು ಸಾಧ್ಯವಿಲ್ಲ. ಎಲ್ಲರ ಸಹಕಾರ ಅಗತ್ಯ. ಹೀಗಾಗಿ ಭಾರತೀಯ ಸಂಸ್ಕೃತಿ ಉತ್ಸವ ಹಾಗೂ ಕೊತ್ತಲ ಸ್ವರ್ಣ ಕರ‍್ಯಕ್ರಮಕ್ಕೆ ಪ್ರತಿಯೊಬ್ಬರೂ ಸಾಥ್ ನೀಡಬೇಕು ಎಂದು ನೊಣವಿನಕೆರೆ ಶ್ರೀ ಕಾಡಸಿದ್ಧೇಶ್ವರ ಮಠದ ಶ್ರೀ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗೇಶ್ವರ ಸ್ವಾಮೀಜಿ ಹೇಳಿದರು.

ನಾಗೇಂದ್ರಪ್ಪ ಬ.ಪಾಟೀಲ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಭಾರತೀಯ ಸಂಸ್ಕೃತಿ ಉತ್ಸವ-7 ಹಾಗೂ ಕೊತ್ತಲ ಸ್ವರ್ಣ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, 2025ರಲ್ಲಿ ಜರುಗುವ ಐತಿಹಾಸಿಕ ಕರ‍್ರ್ಯಕ್ರಮಕ್ಕೆ ಇಲ್ಲಿನ ನೆಲ ಸಜ್ಜಾಗಿದೆ. ತಯಾರಿಗಳನ್ನು ಗಮನಿಸಿದರೆ ಸುವರ್ಣ ಅಕ್ಷರದಲ್ಲಿ ಬರೆದಿಡುವಂತಹ ಕರ‍್ಯಕ್ರಮ ಇದಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಂತಹ ಮಹತ್ವದ ಕರ‍್ಯಕ್ಕೆ ಶ್ರೀಮಠದಿಂದ ಐದು ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು.

ಭಾರತೀಯ ಸಂಸ್ಕೃತಿ ಉತ್ಸವದ ಪ್ರಧಾನ ಸಂಯೋಜಕ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಡಾ.ಬಸವರಾಜ ಪಾಟೀಲ್ ಸೇಡಂ ಮಾತನಾಡಿ, ಪರಿವಾರದ ಕಲ್ಪನೆಯೊಂದಿಗೆ ಉತ್ಸವ ಆಯೋಜನೆ ಮಾಡಲಾಗಿದೆ. ಇಲ್ಲಿ ನಮ್ಮ ನೆಲದ ಇತಿಹಾಸ, ಸಂಸ್ಕೃತಿ ಬಿಂಬಿಸುವ ಕೆಲಸ ನಡೆಯಲಿದೆ. ಲಕ್ಷಾಂತರ ಜನ ನೇರವಾಗಿ ಕರ‍್ಯಕ್ರಮದಲ್ಲಿ ಭಾಗಿಯಾದರೆ, ಕೋಟ್ಯಾಂತರ ಜನರ ಮೇಲೆ ಪರಿಣಾಮ ಬೀರಲಿದೆ ಎಂದರು.
ಭಾರತ ವಿಕಾಸ ಸಂಗಮ ಸಂಸ್ಥಾಪಕ ಕೆ.ಎನ್ ಗೋವಿಂದಾಚಾರ್ಯ ಮಾತನಾಡಿದರು. ಹಾಲಪ್ಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ ಸಾನ್ನಿಧ್ಯ, ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ಓಡಿಸ್ಸಾದ ಶ್ರೀ ಭಾಸ್ಕರತೀರ್ಥ ದಂಡೇಶ್ವರ ಸ್ವಾಮೀಜಿ, ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರು, ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಹರ್ಷಾನಂದ ಸ್ವಾಮೀಜಿ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ವಂದೇ ಮಾತರಂ ಫೌಂಡೇಷನ್ ಸಂಸ್ಥಾಪಕ ಮಾಧವರೆಡ್ಡಿ, ಕೊತ್ತಲ ಬಸವೇಶ್ವರ ಸಂಸ್ಥೆಯ ಮೊದಲ ಶಿಕ್ಷಕ ಶಿವರಾಮರೆಡ್ಡಿ ಚಟಕಿಂದಿ, ಮೊದಲ ವಿದ್ಯಾರ್ಥಿ ದತ್ತಾತೇಯ್ಯ ಐನಾಪುರ, ವಾಸುದೇವ ದೇಶಪಾಂಡೆ ಇತರರಿದ್ದರು.

ಕಲಾವಿದರಾದ ವೀರೇಶ ಹೂಗಾರ, ವೀರೇಂದ್ರ ಭಂಟನಳ್ಳಿ ಪ್ರಾರ್ಥಿಸಿದರು. ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಅನುರಾಧಾ ಪಾಟೀಲ್ ಸ್ವಾಗತಿಸಿದರು. ನಿವೃತ್ತ ಉಪನ್ಯಾಸಕ ಜಗದೀಶ ಕಡಬಗಾಂವ್ ನಿರೂಪಣೆ ಮಾಡಿ, ವಂದಿಸಿದರು.

5 ಲಕ್ಷ ರೂ. ದೇಣಿಗೆ ಘೋಷಿಸಿದ ನೋಣವಿನಕೆರೆ ಶ್ರೀ: ಇಡೀ ದೇಶವೇ ಎದುರು ನೋಡುತ್ತಿರುವ ಐತಿಹಾಸಿಕ ಸಾಂಸ್ಕೃತಿಕ ಉತ್ಸವ-7 ಹಾಗೂ ಕೊತ್ತಲ ಸ್ವರ್ಣ ಕಾರ್ಯಕ್ರಮಕ್ಕೆ ನೊಣವಿನಕೆರೆ ಶ್ರೀ ಕಾಡಸಿದ್ಧೇಶ್ವರ ಮಠದ ಶ್ರೀ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗೇಶ್ವರ ಸ್ವಾಮಿಗಳು 5 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು. ಅಲ್ಲದೆ ಸ್ಥಳದಲ್ಲೇ 1 ಲಕ್ಷ ರೂ. ಉತ್ಸವ ಸಮಿತಿಗೆ ಹಸ್ತಾಂತರಿಸಿದರು. ಇನ್ನು ಸಮಾರಂಭಕ್ಕೆ ಬೇಕಾಗುವ ತೆಂಗು ಹಾಗೂ ಕೊಬ್ಬರಿ ಕಳಿಸಿಕೊಡುವುದಾಗಿ ಶ್ರೀಗಳು ವಾಗ್ದಾನ ನೀಡಿದರು.

ಬೃಹತ್ ಇನ್ವಿಟೇಶನ್ ಕಾರ್ಡ್: ಸಾಂಸ್ಕೃತಿಕ ಉತ್ಸವ ಹಾಗೂ ಕೊತ್ತಲ ಸ್ವರ್ಣ ಜಯಂತಿ ಸಮಾರಂಭದ ಆಮಂತ್ರಣ ಪತ್ರಿಕೆ ಸಾಕಷ್ಟು ವಿಶೇಷತೆ ಹೊಂದಿದೆ. ಬರೋಬ್ಬರಿ 22 ಪುಟಗಳನ್ನು ಹೊಂದಿದ್ದು, ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಮುದ್ರಣಗೊಂಡಿದೆ. ಇದಲ್ಲದೆ 2025ರ ಜ.29ರಿಂದ ಫೆÀ.6ರವರೆಗೆ ನಿತ್ಯ ನಡೆಯುವ ಕಾರ್ಯಕ್ರಮಗಳ ವಿವರ, ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಹಿತಿ ಕೊಡಲಾಗಿದೆ. ಜ.29ರಂದು ಮಾತೃ ಸಮಾವೇಶ, ಜ.30 ಎರಡನೇ ದಿನ ಶೈಕ್ಷಣಿಕ, ಜ.31ಯುವ, ಫೆ.1 ಗ್ರಾಮ- ಕೃಷಿ, ಫೆ.2 ಆಹಾರ- ಆರೋಗ್ಯ, ಫೆ.3 ಸ್ವಯಂ ಉದ್ಯೋಗ, ಫೆ.4 ಪ್ರಕೃತಿ ಮತ್ತು ನಾವು, ಫೆ.5 ಸೇವಾ ಶಕ್ತಿ, ಫೆ.6 ದೇಶ, ಧರ್ಮ ಹಾಗೂ ಸಂಸ್ಕೃತಿ ಸಮಾವೇಶಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net