ಐತಿಹಾಸಿಕ ಮುಚಖಂಡಿ ವೀರಭದ್ರೇಶ್ವರ ಬೆಳ್ಳಿ ರಥೋತ್ಸವ

bkt-6-7
ಬಾಗಲಕೋಟೆ ತಾಲೂಕಿನ ಮುಚಖಂಡಿ ಗ್ರಾಮದಲ್ಲಿ ಅಮವಾಸೆ ನಿಮಿತ್ಯ ಐತಿಹಾಸಿಕ ವೀರಭದ್ರೇಶ್ವ ಸ್ವಾಮೀಜಿ ಬೆಳ್ಳಿ ರಥೋತ್ಸವ.
Published on

ಬಾಗಲಕೋಟೆ: ತಾಲೂಕಿನ ಮುಚಖಂಡಿ ಗ್ರಾಮದಲ್ಲಿ ಅಮವಾಸೆ ನಿಮಿತ್ಯ ಐತಿಹಾಸಿಕ ವೀರಭದ್ರೇಶ್ವ ಸ್ವಾಮೀಜಿ ಬೆಳ್ಳಿ ರಥೋತ್ಸವ ಹಾಗೂ ಅನ್ನಸಂತರ್ಪಣೆ ಶೃದ್ಧಾಭಕ್ತಿಯಿಂದ ಗುರುವಾರ ಜರುಗಿತು.

ವೀರಭದ್ರೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ವೀರಭದ್ರೇಶ್ವರನಿಗೆ ಮಹಾರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಮೃತ್ಯುಂಜಯ ಮಂತ್ರ ಜಪ, ಪಂಚಾಕ್ಷರಿ ಮಂತ್ರ, ವಿರಭದ್ರೇಶ್ವರಸ್ವಾಮಿಯ ಅಷ್ಟೋತ್ರ ಪಠಣ, ಪುಷ್ಪಾಲಂಕಾರ, ಮಹಾಮಂಗಳಾರುತಿ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಮದ್ಯಾಹ್ನ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿ ಸೇವೆ, ಪುರವಂತರ ಸೇವೆಯೊಂದಿಗೆ ಸ್ವಾಮಿಯ ಬೆಳ್ಳಿರಥೋತ್ಸವ ನಡೆಯಿತು. ಅಲ್ಲದೆ ಭಗವತಿ ಅನ್ನಪೂಣೇಶ್ವರಿಗೆ ದೇವಿ ಪೂಜೆ ಸಲ್ಲಿಸಿ ವೀರಭದ್ರಶ್ವರ ಸ್ವಾಮಿಯ ಮಹಾಪ್ರಸಾಧದ ಅನ್ನಸಂತರ್ಪಣೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ವೀರಭದ್ರೇಶ್ವರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುರುಬಸವ ಸೂಳಿಬಾವಿ, ಪ್ರಭುಸ್ವಾಮಿ ಸರಗಣಾಚಾರಿ, ಸಂಗಯ್ಯ ಸರಗಣಾಚಾರಿ, ಅಪ್ಪು ಅಂಟಿನ, ಮಹೇಶ ಅಂಗಡಿ, ವೀರೇಶ ಅಥಣಿ, ಮುರಗೇಪ್ಪ ನಾರಾ, ರಾಜು ಹಲಕುರ್ಕಿ, ರಾಜು ಸಜ್ಜನ, ಸಂಗನಬಸವ ಗದ್ದಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net