ಐತಿಹಾಸಿಕ ದಿ ಕಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಿಸಿದ ಪೂಜ್ಯರು

Capture1
Published on

ಬೀದರ್: ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಕುರಿತ ನೈಜ ಘಟನೆಗಳನ್ನು ಆಧರಿಸಿರುವ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ `ದಿ ಕಶ್ಮೀರ್ ಫೈಲ್ಸ್' ಚಿತ್ರದ ಉಚಿತ ವೀಕ್ಷಣೆಗೆ ಗುರುವಾರ ಸಪ್ನಾ ಮಲ್ಟಿಪ್ಲೆಕ್ಸ್ನಲ್ಲಿ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ವ್ಯವಸ್ಥೆ ಮಾಡಿದ್ದರು.

ಔರಾದ್, ಕಮಲನಗರ ಸೇರಿ ಜಿಲ್ಲೆಯ ವಿವಿಧೆಡೆಯಿಂದ ಪೂಜ್ಯರು, ಮುಖಂಡರು, ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಮಧ್ಯಾಹ್ನ 2.15 ಮತ್ತು 2.30ರ ಎರಡು ಶೋಗಳನ್ನು ಪ್ರತ್ಯೇಕ ಪರದೆಗಳಲ್ಲಿ ಉಚಿತ ವೀಕ್ಷಣೆಗೆ ಚವ್ಹಾಣ್ ವ್ಯವಸ್ಥೆ ಮಾಡಿದ್ದರು. ಚಿತ್ರ ವೀಕ್ಷಿಸುವ ವೇಳೆ ಸಾರ್ವಜನಿಕರು ಭಾರತ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆ ಕೂಗುವುದರೊಂದಿಗೆ ದೇಶಭಕ್ತಿ ಪ್ರದರ್ಶಿಸಿದರು.

ಸಾರ್ವಜನಿಕರ ಸಾಲಿನಲ್ಲಿ ಕುಳಿತು ಸಿನಿಮಾ ವೀಕ್ಷಿಸಿದ ನಂತರ ಸಚಿವ ಚವ್ಹಾಣ್ ಮಾತನಾಡಿ, ಇತಿಹಾಸಕಾರರು ಮುಚ್ಚಿಟ್ಟಿದ್ದ ನೈಜ ಘಟನೆಯನ್ನು ನಿದರ್ೇಶಕ ವಿವೇಕ್ ಅಗ್ನಿಹೋತ್ರಿ ಧೈರ್ಯದಿಂದ ಬಯಲಿಗೆ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಂಡಿತರು ಕಾಶ್ಮೀರ ತೊರೆದದ್ದು ಏಕೆ ಎಂಬ ಕುತೂಹಲ ನನ್ನನ್ನು ಒಳಗೊಂಡಂತೆ ಇಡೀ ದೇಶದ ಜನರನ್ನು ಕಾಡುತಿತ್ತು. ಬಹಳಷ್ಟು ಅಧ್ಯಯನ ಮಾಡಿದ ನಂತರ ನಿದರ್ೇಶಕ ಅಗ್ನಿಹೋತ್ರಿ ಅವರು ಸತ್ಯ ಸಂಗತಿಗಳನ್ನು ಸಿನಿಮಾ ಮೂಲಕ ಜನತೆಗೆ ತೋರಿಸಿಕೊಟ್ಟಿದ್ದಾರೆ. ಎಲ್ಲರ ಮನ ಮುಟ್ಟುವಂತೆ ಕಾಶ್ಮೀರಿ ಪಂಡಿತರ ಇತಿಹಾಸವನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದರು.

ಪೂಜ್ಯರಾದ ಶಿವಯೋಗೇಶ್ವರ ಸ್ವಾಮೀಜಿ, ರಾಮಕೃಷ್ಣ ಸ್ವಾಮೀಜಿ, ಪಂಡಿತಾರಾಧ್ಯ ಸ್ವಾಮೀಜಿ, ರೇಣುಕಾರಾಧ್ಯ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಪ್ರಭುದೇವರು, ಸಿದ್ಧರಾಮೇಶ್ವರ ಸ್ವಾಮೀಜಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಶಾರೀರಿಕ ಪ್ರಮುಖ ನಾಗೇಶರಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ರಾಮಕೃಷ್ಣ ಸಾಳೆ, ಪ್ರಮುಖರಾದ ಶಕುಂತಲಾ ಬೆಲ್ದಾಳೆ, ಬಾಬುರಾವ ಮದಕಟ್ಟಿ, ಬಂಡೆಪ್ಪ ಕಂಟೆ, ರಾಮಶೆಟ್ಟಿ ಪನ್ನಾಳೆ, ಸುರೇಶ ಭೋಸ್ಲೆ, ಲುಂಬಿಣಿ ಗೌತಮ, ರಮೇಶ ಉಪಾಸೆ, ವೆಂಕಟರಾವ ಡೊಂಬಾಳೆ, ಹಣಮಂತ ಸುರನಾರ, ಖಂಡೋಬಾ ಕಂಗಟೆ, ರಾಜಕುಮಾರ ನೆಮತಾಬಾದ್ ಇತರರು ಚಿತ್ರ ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net