ಐಟಿ ದಾಳಿ,ಕಾಂಗ್ರೆಸ್-ಬಿಜೆಪಿ ಪರಸ್ಪರ ಪ್ರತ್ಯಾರೋಪ

DSC_0644--01
Published on

ಚಿತ್ರದುರ್ಗ: ಐಟಿ ದಾಳಿಯಲ್ಲಿ ಬೆಂಗಳೂರಲ್ಲಿ ಸಿಕ್ಕಿರುವ ಕೋಟ್ಯಂತರ ಹಣ ಕುರಿತು ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಪರಸ್ಪರ ಆರೋಪ, ಪ್ರತ್ಯಾರೋಪ ಸೋಮವಾರ ನಡೆಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ್, ಪಕ್ಷದ ರಾಜ್ಯಾಧ್ಯಕ್ಷ, ಪ್ರತಿಪಕ್ಷ ನಾಯಕನ ಸ್ಥಾನ ಪಡೆಯಲು ಬಿಜೆಪಿ ವರಿಷ್ಠರನ್ನು ಮೆಚ್ಚಿಸಲು ಅನಗತ್ಯ, ಅಧಾರ ರಹಿತವಾಗಿ ಕಾಂಗ್ರೆಸ್ ವಿರುದ್ಧ ಭಾಜಪ ನಾಯಕರು ಆರೋಪ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ರಾಜ್ಯದ ನಾಯಕರನ್ನು ಡೆಲ್ಲಿಗೆ ಕರೆದು ಮಾತನಾಡಿಸುವ ಸ್ಥಿತಿಯಲ್ಲಿ ಅವರ ಹೈಕಮಾಂಡ್ ಇಲ್ಲ. ಬರಗಾಲದ ಸಂದರ್ಭದಲ್ಲಿ ನಮ್ಮೊಂದಿಗೆ ಕೈ ಜೋಡಿಸದೆ ಕಾಂಗ್ರೆಸ್ ಇಮೇಜ್‌ಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆಂದು ದೂರಿದರು.
ಐಟಿ ದಾಳಿಯಲ್ಲಿ ಬೆಂಗಳೂರಲ್ಲಿ ಸಿಕ್ಕಿರುವ ಹಣ ಯಾವ ಪಕ್ಷಕ್ಕಾದ್ದರೂ ಸೇರಿರಬಹುದು. ಈ ಬಗ್ಗೆ ತನಿಖೆ ನಡೆಯುತ್ತಿದೆ. ಪ್ರಕರಣವನ್ನು ತನಿಖಾ ಆಯೋಗಕ್ಕೆ ಸರ್ಕಾರ ಕೊಡಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net