ಐಗೂರು ಸರ್ಕಾರಿ ಶಾಲೆ ಸಂಸತ್‌ಗೆ ಆಯ್ಕೆ

29spt1
Published on

ಮಡಿಕೇರಿ: ಸೋಮವಾರಪೇಟೆ ಸಮೀಪದ ಐಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಶಾಲಾ ಸಂಸತ್‌ಗೆ ಬುಧವಾರ ಚುನಾವಣೆ ನಡೆಯಿತು. ವಿದ್ಯಾರ್ಥಿಗಳು ಮೊಬೈಲ್ ಆ್ಯಪ್‌ನ ಇವಿಎಂ ಯಂತ್ರದಲ್ಲಿ ಮತದಾನ ಮಾಡಿದರು. ಶಾಲಾ ಕಚೇರಿಯಲ್ಲಿ ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ಮತ ಎಣಿಕೆ ನಡೆಯಿತು.

ಪ್ರಧಾನಮಂತ್ರಿಯಾಗಿ 10ನೇ ತರಗತಿಯ ಪ್ರಜೇಶ್ ಆಯ್ಕೆಯಾದರು. ಉಪ ಪ್ರಧಾನಿಯಾಗಿ ಟಿ.ಎಂ.ಮನು, ಗೃಹ ಮಂತ್ರಿಯಾಗಿ ಕೆ. ಶಶಿಕುಮಾರ್, ಉಪಗೃಹ ಮಂತ್ರಿ ಎಂ.ಕೆ.ನಿಶಾಂತ್, ನೀರಾವರಿ ಮಂತ್ರಿ 9ನೇ ತರಗತಿ ಎಂ.ಪ್ರೀತಂ, ಉಪನೀರಾವರಿ ಮಂತ್ರಿ ಬಿ.ಜೆ.ಧನುಶ್ರೀ, ಆರೋಗ್ಯಮಂತ್ರಿ ಅಕ್ಷತಾ, ಉಪ ಆರೋಗ್ಯ ಮಂತ್ರಿ ಅರುಂಧತಿ, ಆಹಾರ ಮಂತ್ರಿ ಎ.ರಕ್ಷಿತಾ, ಉಪ ಆಹಾರ ಮಂತ್ರಿ ಡಿ.ಕೌಶಲ್ಯ, ವಾರ್ತಾ ಮಂತ್ರಿ ಕೆ.ಎಂ.ನಿಶಾಂತ್ ಉಪ ಆಹಾರ ಮಂತ್ರಿ ಕೆ. ಸಿಂಚನಾ, ಕ್ರೀಡಾಮಂತ್ರಿ ಎಂ.ಅಕ್ಷಯ್, ಉಪ ಕ್ರೀಡಾ ಮಂತ್ರಿಯಾಗಿ ಆರ್.ಚಂದನ್, ಸಾಂಸ್ಕೃತಿಕ ಮಂತ್ರಿ 8ನೇ ತರಗತಿಯ ಬಿ.ಎಸ್. ರಿಶಿತಾ, ಉಪಸಾಂಸ್ಕೃತಿಕ ಮಂತ್ರಿ ಆರ್.ಶಿವಕುಮಾರ್, ಸ್ವಚ್ಛತಾ ಮಂತ್ರಿ ಎಚ್.ಹೇಮಂತ್,ಉಪ ಸ್ವಚ್ಛತಾ ಮಂತ್ರಿಯಾಗಿ ಎಚ್.ಡಿ. ಜಸ್ಮಿತಾ ಆಯ್ಕೆಗೊಂಡರು.

ಚುನಾವಣೆ ಅಧಿಕಾರಿಯಾಗಿ ಮುಖ್ಯಶಿಕ್ಷಕ ಎಂ.ಎಂ.ಯಶವಂತ್ ಕುಮಾರ್, ಸಹಾಯಕ ಅಧಿಕಾರಿಗಳಾಗಿ ಎಸ್.ಕೆ.ರಾಜರತ್ನ, ಎಸ್.ಎಸ್. ರಂಜಿನಿ, ಜಿ.ಮಂಜುನಾಥ್ ಎ.ಬಿ.ರೇಖಾ, ಎಚ್.ಬಿ.ಕೃಷ್ಣಪ್ಪ, ಜಿ.ಗುಲಾಬಿ, ಎಚ್.ಕೆ.ದಿನೇಶ್ ಕುಮಾರ್ ಕರ್ತವ್ಯ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net