

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾ. ೧೧ರಂದು ಮಧ್ಯಾಹ್ನ ೩ ಗಂಟೆಗೆ ಐಐಟಿ ಕಟ್ಟಡ ಉದ್ಘಾಟನೆ ಹಾಗೂ ರಾಜ್ಯ ಹಾಗೂ ಕೇಂದ್ರದ ಪ್ರಮುಖ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸುವರು ಎಂದು ಕೆಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ತಾಲೂಕಿನ ಮುಮ್ಮಿಗಟ್ಟಿ ಬಳಿಯ ಐಐಟಿಯ ನೂತನ ಕಟ್ಟಡದ ನರ‍್ಮಾಣ ಹಂತದ ಕಾಮಗಾರಿಯನ್ನು ಶುಕ್ರವಾರ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಐಐಟಿ ಕಟ್ಟಡದ ಕಾಮಗಾರಿ ಬಹುತೇಕ ಮುಕ್ತಾಯವಾಗಿದ್ದು, ಉಳಿದ ಕೆಲಸವನ್ನು ಶೀಘ್ರ ಮುಕ್ತಾಯಗೊಳಿಸುವಂತೆ ಐಐಟಿಯ ಕಟ್ಟಡ ನರ‍್ಮಾಣದ ಕಂಪನಿಯ ಸಿಇಒಗೆ ತಿಳಿಸಲಾಗಿದೆ. ಐಐಟಿ ಪಕ್ಕದ ಜಾಗದಲ್ಲಿ ಉದ್ಘಾಟನಾ ಕರ‍್ಯಕ್ರಮ ಜರುಗುವುದು. ಕರ‍್ಯಕ್ರಮದಲ್ಲಿ ಸುಮಾರು ಲಕ್ಷ ಜನ ಸೇರುವು ನಿರೀಕ್ಷೆ ಇದೆ ಎಂದರು.
ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ತವನಪ್ಪ ಅಷ್ಟಗಿ, ಮೇಯರ್ ಈರೇಶ ಅಂಚಟಗೇರಿ, ಜಿಲ್ಲಾಽಕಾರಿ ಗುರುದತ್ತ ಹೆಗಡೆ, ಪೊಲೀಸ್ ವರಿಷ್ಠಾಽಕಾರಿ ಲೋಕೇಶ ಜಗಲಾಸರ್, ಜಿ.ಪಂ. ಸಿಇಒ ಡಾ. ಸುರೇಶ ಇಟ್ನಾಳ, ಐಐಟಿಯ ನರ‍್ದೇಶಕ ಪ್ರೊ. ವೆಂಕಪಯ್ಯ ದೇಸಾಯಿ, ರಿಜಿಸ್ಟಾçರ್ ಪ್ರೊ. ಬಸವರಾಜಪ್ಪ, ಪ್ರೊ. ಸನತ್ ಕುಮಾರ್ ರಾಜಮಾನೆ , ಇತರರಿದ್ದರು.