

ಗೋಕಾಕ: ಪ್ರಾಯೋಗಿಕ ಕಲಿಕೆ ವಿದ್ಯಾರ್ಥಿ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪ್ರಾಯೋಗಿಕ ಕಲಿಕೆಯಿಂದ ಯಶಸ್ವಿ ಜೀವನ ನಡೆಸಲು ಸಾಧ್ಯ ಎಂದು ಬೆಂಗಳೂರಿನ ಎಕ್ಸ್&ವರ್ಕ್ಸ್ ಕಂಪನಿಯ ಹಿರಿಯ ಉದ್ಯೋಗ ಅಭಿವೃದ್ಧಿ ಅಧಿಕಾರಿ ಅರಾ ತಿಳಿಸಿದರು.
ನಗರದ ಶ್ರೀ ಚೆನ್ನಬಸವೇಶ್ವರ ವಿದ್ಯಾಪಿಠದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಬಿಸಿಎ ಕಾಲೇಜು ಹಾಗೂ ಎಕ್ಸ್&ವರ್ಕ್ಸ್ ಬೆಂಗಳೂರು ಲಿಮಿಟೆಡ್ ಆಶ್ರಯದಲ್ಲಿ ಬಿಸಿಎ ವಿದ್ಯಾರ್ಥಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಉದ್ಯೋಗ ಭರವಸೆ ಸಹಿ ಸಮಾರಂಭ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಐಐಟಿ ಮತ್ತು ಡಿಪ್ಲೊಮಾ ಓದಿದವರಿಗೆ ಹೆಚ್ಚು ಬೇಡಿಕೆ ಇದೆ. ಜಗತ್ತು ಇಂದು ಸಾಫ್ಟ್ವೇರ್ ಕ್ಷೇತ್ರದ ಕಡೆಗೆ ವಾಲುತ್ತಿದೆ. ವಿದ್ಯಾರ್ಥಿಗಳು ಅದನ್ನು ಗಮನದಲ್ಲಿಟ್ಟುಕೊಂಡು ಒಳ್ಳೆಯ ಜೀವನ ರೂಪಿಕೊಳ್ಳಬೇಕು ಎಂದು ಹೇಳಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಡಿವೇಶ ಗವಿಮಠ, ಶಾಂತನು, ಮಂಜು, ಅರ್ಪಣಾ ಕುಲಕರ್ಣಿ ಇತರರಿದ್ದರು.