ಐಐಇಎಸ್‌ಟಿಯೊಂದಿಗೆ ಶರಣಬಸವ ವಿವಿ ಸಹಯೋಗ

1910klb15
Published on

ಕಲಬುರಗಿ: ಸೌರಶಕ್ತಿ ವಿಭಾಗದಲ್ಲಿ ಜ್ಞಾನದ ಹಂಚಿಕೆ ಮಾಡಿಕೊಳ್ಳಲು ಕಲ್ಕತ್ತಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯು ಶರಣಬಸವ ವಿಶ್ವವಿದ್ಯಾಲಯೊಂದಿಗೆ ಸಹಯೋಗ ಮಾಡಿಕೊಂಡು, ವಿವಿಯ ವಿದ್ಯಾರ್ಥಿಗಳಿಗೆ, ಪ್ರಾಧ್ಯಾಪಕರಿಗೆ ತರಬೇತಿ ನೀಡಲು ಮುಂದಾಗಿದೆ.

ನಗರದ ಶರಣಬಸವ ವಿಶ್ವವಿದ್ಯಾಲಯಕ್ಕೆ ಕೋಲ್ಕತ್ತಾದ ಶಿಬ್‌ಪುರದ ಐಐಇಎಸ್‌ಟಿ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ ಅವರು ಬುಧವಾರ ಭೇಟಿ ನೀಡಿದ ವೇಳೆ ವಿವಿ ಉಪ ಕುಲಪತಿ ಡಾ.ನಿರಂಜನ್ ನಿಷ್ಠಿ ಸಲ್ಲಿಸಿದ ಮನವಿ ಸ್ವೀಕರಿಸಿ, ಉನ್ನತ ಶಿಕ್ಷಣದ ಎರಡು ಕೇಂದ್ರಗಳ ಮಧ್ಯೆ ಶೈಕ್ಷಣಿಕ ಸಹಯೋಗ ನೀಡಲಾಗುವುದು ಎಂದು ಭರವಸೆ ನೀಡಿದರು.

ಪರೀಕ್ಷಾ ಸೌಲಭ್ಯಕ್ಕೆ ಅಗತ್ಯ ತಾಂತ್ರಿಕ ಜ್ಞಾನ ಪೂರೈಸಲಾಗುವುದು. ಪರೀಕ್ಷೆ ನಡೆಸಲು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಸೌರ ಕೋಶ ಉತ್ಪಾದನೆ ಕುರಿತು ತರಬೇತಿ ನೀಡುವ ಸಾಧ್ಯತೆ ನಮ್ಮ ಸಂಸ್ಥೆ ಸಂಶೋಧಿಸುತ್ತದೆ. ನಮ್ಮಲ್ಲಿ ಆರ್ಕಿಟೆಕ್ಷರ್ ವಿಭಾಗ ದೇಶದಲ್ಲೇ ಆರನೇ ಸ್ಥಾನದಲ್ಲಿದೆ ಎಂದು ತಿಳಿಸಿದರು. ಶರಣಬಸವ ವಿಶ್ವವಿದ್ಯಾಲಯ ಸಲ್ಲಿಸಿದ ವಿವರಗಳನ್ನು ಅಧ್ಯಯನ ಮಾಡಿ, ಶೀಘ್ರದಲ್ಲಿ ವಿವರವಾದ ತಿಳುವಳಿಕೆ ಒಪ್ಪಂದ ಪತ್ರದೊಂದಿಗೆ ನೀಡುತ್ತೇನೆ ಎಂದು ಆಶ್ವಾಸನೆ ನೀಡಿದರು.

ವಿವಿ ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಉಪಕುಲಪತಿ ಡಾ.ನಿರಂಜನ ನಿಷ್ಠಿ, ಡೀನ್ ಡಾ.ಲಕ್ಷ್ಮೀ ಪಾಟೀಲ್ ಮಾಕಾ, ಸಮಕುಲಪತಿ ಪ್ರೊ.ವಿ.ಡಿ.ಮೈತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net