

ಹುಬ್ಬಳ್ಳಿ: ಮಕ್ಕಳಿಗೆ ಆಟಿಕೆ ವಸ್ತುಗಳನ್ನು ಖರೀದಿ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಐಎಸ್ಐ ಚಿಹ್ನೆಯನ್ನು ಗಮನಿಸಬೇಕು. ಇಂತಹ ಗುರುತು ಇಲ್ಲದ ವಸ್ತುಗಳು ಅಪಾಯಕಾರಿಯಾಗಿವೆ ಎಂದು ಭಾರತೀಯ ಮಾನಕ ಬ್ಯೂರೋ (ಬಿಐಎಸ್) ತಿಳಿಸಿದೆ.
ಐಎಸ್ಐ ಮಾರ್ಕಿಲ್ಲದಿದ್ದರೆ ಅವು ಗುಣಮಟ್ಟದ ಆಟಿಕೆಗಳಲ್ಲ. 14 ವರ್ಷದ ಒಳಗಿನ ಮಕ್ಕಳಿಗಾಗಿ ತಯಾರಿಸಿದ ಆಟಿಕೆಗಳ ಮೇಲೆ ಐಎಸ್ಐ ಚಿಹ್ನೆ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ. ಹಾಗಾಗಿ, ಉತ್ಪಾದಕರು ಅಥವಾ ವ್ಯಾಪಾರಿಗಳು ಐಎಸ್ಐ ಚಿಹ್ನೆ ಇಲ್ಲದಿರುವ ಆಟಿಕೆಗಳನ್ನು ಉತ್ಪಾದನೆ, ಸಂಗ್ರಹ, ಮಾರಾಟ ಮಾಡುವಂತಿಲ್ಲ.
ಐಎಸ್ಐ ಇಲ್ಲದ ಆಟಿಕೆ ಮಾರಾಟ ಮಾಡಿದರೆ ಭಾರತೀಯ ಮಾನಕ ಬ್ಯೂರೋ ಅಧಿನಿಯಮ ಉಲ್ಲಂಘನೆಯಾಗುತ್ತದೆ. ಅಪರಾಧಿಗಳಿಗೆ ಎರಡು ವರ್ಷ ಕಾರಾಗೃಹ ಶಿಕ್ಷೆ ಅಥವಾ 2 ಲಕ್ಷ ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
www.bis.gov.in
ಮೂಲಕ ಭಾರತೀಯ ಮಾನಕ ಬ್ಯೂರೋ ಕಾರ್ಯಾಲಯಗಳ ಮಾಹಿತಿ ತಿಳಿದುಕೊಳ್ಳಬೇಕು. ಆಟಿಕೆ ಮೇಲಿನ ಐಎಸ್ಐ ಚಿಹ್ನೆಯ ಅಸಲಿಯತ್ತು ತಿಳಿದುಕೊಳ್ಳಲು ಬಿಐಎಸ್ ಕೇರ್ ಆಪ್ ಬಳಸಬಹುದು. ಒಂದು ವೇಳೆ ನಕಲಿಯಾಗಿದ್ದಲ್ಲಿ ಆಪ್ನಲ್ಲೇ ದೂರು ನೀಡಬಹುದು. ಕಚೇರಿ ವಿಳಾಸ. ಭಾರತೀಯ ಮಾನಕ ಬ್ಯೂರೋ, ಹುಬ್ಬಳ್ಳಿ ಶಾಖೆ, ಒಂದನೇ ಮಹಡಿ, ಕೆಎಸ್ಎಫ್ಸಿ ಕಟ್ಟಡ, ರಾಯಾಪುರ, ಧಾರವಾಡ, ಕರ್ನಾಟಕ- 80009.