

ಬೈಲಹೊಂಗಲ: ಐಎಎಸ್ ಅಧಿಕಾರಿಯಾಗುವ ಕನಸು ನನಸಾಗಬೇಕಾದರೆ ಶಿಸ್ತುಬದ್ಧವಾಗಿ ಅಧ್ಯಯನ ಮಾಡಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಮೊಬೈಲ್ ಬಿಟ್ಟು ಅಧ್ಯಯನಶೀಲರಾಗಬೇಕು. ಮೊಬೈಲ್ ಬಳಕೆಯಿಂದ ಮನಸ್ಸು, ಸಾಧನೆ ಹಾಳಾಗುತ್ತದೆ. ಶ್ರದ್ಧೆ, ಪರಿಶ್ರಮದಿಂದ ಓದಿದರೆ ಮಾತ್ರ ಅಂಕ ಗಳಿಸಬಹುದು. ಕಠಿಣ ಪರಿಶ್ರಮದಿಂದ ಕಂಡ ಕನಸು ನನಸಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಸತತ ಪ್ರಯತ್ನದಲ್ಲಿ ತೊಡಗಿರಬೇಕು ಎಂದರು.
ಶಾಸಕ ಮಹಾಂತೇಶ ಕೌಜಲಗಿ ಅಧ್ಯತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಓದು ಬಹುಮುಖ್ಯ. ವಿದ್ಯಾರ್ಥಿಗಳಿಗೆ ಸಾಧಕರ ಮಾರ್ಗದರ್ಶನ ಅತ್ಯವಶ್ಯ. ಯುವಜನರು ಣಿಕ ಸುಖಕ್ಕಾಗಿ ಸೇವಿಸುವ ಮಾದಕ ವಸ್ತುಗಳು ಆರೋಗ್ಯ ಹಾಳುಮಾಡುವ ಜತೆಗೆ ಸಮಾಜದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ. ಆದ್ದರಿಂದ ಯಾರೂ ಮಾದಕ ವಸ್ತುಗಳ ಸೇವನೆಯ ಬಲೆಗೆ ಬೀಳಬಾರದು. ಸರ್ಕಾರ ಜಾರಿಗೆ ತಂದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ದ್ವೀತಿಯ ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಕಾಲೇಜಿನ ಪ್ರಭಾರಿ ಪ್ರಾಚಾರ್ಯ ಬಿ.ಎಂ. ಕೊಳವಿ, ಸಿಡಿಸಿ ಉಪಾಧ್ಯ ಅಶೋಕ ವಾಲಿ, ತಾಪಂ ಇಒ ಸುಭಾಸ ಸಂಪಗಾವಿ, ಸಿಡಿಸಿ ಸದಸ್ಯರಾದ ವೀರಣ್ಣ ಜವಳಿ, ಆರ್.ಕೆ.ಪಾಟೀಲ, ಚಂದ್ರಶೇಖರ ಹೊಸೂರ, ಈರಣ್ಣ ಬೆಟಗೇರಿ, ರಾಜು ಬಡ್ಲಿ, ಮಲ್ಲೇಶಪ್ಪ ಹೊಸಮನಿ, ಅಂಬಿಕಾ ಕೊಟಬಾಗಿ, ಹಿರಿಯ ಉಪನ್ಯಾಸಕರಾದ ಬಸವರಾಜ ಪುರಾಣಿಕಮಠ, ಬಿ.ಸಿ. ಅಡಕಿ, ಎಚ್.ಆರ್.ಪಾಟೀಲ, ಆರ್.ಬಿ.ಹುನಗುಂದ, ಆರ್.ಎನ್.ದೊಡ್ಡಗಾಣಗಿ, ಎಂ.ಎಂ.ೂಡಗೇರಿ, ಎಂ.ಆರ್.ಬಾಗೇವಾಡಿ, ಎ.ಬಿ.ಹುಲಕುಂದ, ಸೃಷ್ಟಿ ಯಾತಗೇರಿ, ಬಸವರಾಜ ಸಂಪಗಾವಿ, ಶ್ರೀನಿಧಿ ಹೆಬ್ಬಳ್ಳಿ, ಅನುಶ್ರೀ ಬಿಜ್ಜನ್ನವರ, ಸೌಜನ್ಯ ಹಡಪದ, ದೀಪಾ ಮೆಳೆಪ್ಪನವರಮಠ ಇತರರಿದ್ದರು.