ಮೈಸೂರು: ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಸೇರಿದಂತೆ ಏಳು ಮಂದಿ ಸಾಧಕರನ್ನು ರಾಜ್ಯ ಮಟ್ಟದ ಕಲೆಮನೆ ಕಲಾಶ್ರೀ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ರಾಯಚೂರಿನ ಸಾಂಸ್ಕೃತಿಕ ಸಂಘಟಕ ಮಾರುತಿ ಬಡಿಗೇರ್, ಸಾಗರದ ಪರಿಣಿತಿ ಕಲಾಕೇಂದ್ರದ ನಿರ್ದೇಶಕ ಎಂ.ಗೋಪಾಲ್, ಮೈಸೂರು ರಾಮಾಮೃತ ಕಲಾಮಂಟಪದ ನಿರ್ದೇಶಕ ಆನಂದರಾಜೇ ಅರಸ್, ಭರತನಾಟ್ಯ ಕಲಾವಿದ ಎಸ್.ಎಂ.ಶರತ್, ಮೈಸೂರಿನ ಕಲಾನಿಧಿ ನೃತ್ಯಶಾಲೆಯ ನಿರ್ದೇಶಕಿ ಪದ್ಮಶೀ, ಮಂಡ್ಯದ ಶ್ರೀ ನಂದಿಕೇಶ್ವರ ಭರತನಾಟ್ಯ ಕಲಾಶಾಲೆಯ ನಿರ್ದೇಶಕಿ ಕೆ.ಎಸ್.ಶೈಲಾ ಅವರು ಪ್ರಶಸ್ತಿಗೆ ಭಾಜನಾಗಿದ್ದಾರೆ ಎಂದು ಕುಮಾರ್ ಪ್ರದರ್ಶಕ ಕಲೆಗಳ ಕೇಂದ್ರದ ಸಂಸ್ಥಾಪಕ ಡಾ.ಕೆ.ಕುಮಾರ್ ತಿಳಿಸಿದ್ದಾರೆ.
ಮಂಚೇಗೌಡನ ಕೊಪ್ಪಲಿನ ಕಲೆಮನೆ ಸಭಾಂಗಣದಲ್ಲಿ ಅ.25 ರಂದು ಸಂಜೆ 4.30ಕ್ಕೆ ನಡೆಯುವ 45ನೇ ನಿರಂತರ ಕಲೆಮನೆ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅಂದು ಕೇಂದ್ರದ ಶಿಷ್ಯರಿಂದ ಭರತನಾಟ್ಯ ಪ್ರದರ್ಶನವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.