ಏಳು ವಾಹನಗಳ ಬ್ಯಾಟರಿ ಕಳವು

Published on

ತುರುವೇಕೆರೆ: ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿರುವ ಪೆಟ್ರೋಲ್​ ಬಂಕ್​ ಹಿಂಭಾಗ ನಿಲ್ಲಿಸಿದ್ದ 7 ವಾಹನಗಳ ಬ್ಯಾಟರಿಗಳನ್ನು ಗುರುವಾರ ರಾತ್ರಿ ಕಳ್ಳರು ಕಳವು ಮಾಡಿದ್ದಾರೆ. ಐದು ಕ್ಯಾಂಟರ್​ಗಳು ಹಾಗೂ ಎರಡು ಕ್ರೇನ್​ಗಳನ್ನು ನಿಲ್ಲಿಸಲಾಗಿತ್ತು. ಬ್ಯಾಟರಿಗಳ ವಯರ್​ಗಳನ್ನು ಕತ್ತರಿಸಿ ಬ್ಯಾಟರಿ ಹೊತ್ತೊಯ್ದಿದ್ದಾರೆ. ತುರುವೇಕೆರೆ ಪೊಲೀಸ್​ ಠಾಣೆ ಬಳಿಯೇ ಈ ಘಟನೆ ನಡೆದಿರುವುದು ಸಾರ್ವಜನಿಕರಿಗೆ ಅಚ್ಚರಿ ತರಿಸಿದೆ. ಅಕ್ಕಪಕ್ಕದಲ್ಲಿರುವ ಸಿಸಿ ಟಿವಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಲಾಗಿದೆ. ವಾಹನಗಳು ರಂಗೇಗೌಡ, ದಾದಾಪೀರ್​, ಚಿದಾನಂದ, ರಮೇಶ್​, ಶಶಿ,ತಸ್ಕಿನ್​, ಕೃಷ್ಣಪ್ಪ ಎಂಬುವರಿಗೆ ಸೇರಿವೆ. ತುರುವೇಕೆರೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net