

ಶಿರಹಟ್ಟಿ: ಜಿಲ್ಲೆಯ ವಿವಿಧಡೆ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಗುರುವಾರ ಬಂಧಿಸಿರುವ ಪಟ್ಟಣದ ಪೊಲೀಸರು ಆತನಿಂದ ಏಳು ಬೈಕ್ ವಶಪಡಿಸಿಕೊಂಡಿದ್ದಾರೆ. ಶಿರಹಟ್ಟಿಯ ವಿಜಯನಗರ ನಿವಾಸಿ ಗುಡದಯ್ಯ ಲಕ್ಷ್ಮಣ ಮೋಡಕೇರ ಬಂಧಿತ ಆರೋಪಿ. ಸಿಪಿಐ ನಾಗರಾಜ ಮಾಡಳ್ಳಿ, ಪಿಎಸ್‌ಐ ಈರಪ್ಪ ರಿತ್ತಿ, ವಿಜಯಕುಮಾರ ತಳವಾರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಆರೋಪಿ ತಾಲೂಕಿನ ಕಡಕೋಳ, ಛಬ್ಬಿ ಹಾಗೂ ಗದಗ ತಾಲೂಕಿನ ಅಂತೂರ, ಬೆಂತೂರ, ಗುತ್ತಲದ ಹುರುಳಿಹಾಳ ಗಜೇಂದ್ರಗಡ ಪಟ್ಟಣ ವ್ಯಾಪ್ತಿಯಲ್ಲಿ ಬೈಕ್‌ಗಳನ್ನು ಕಳ್ಳತನ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.