ಏಳು ತಾಸು ವಿದ್ಯುತ್ ಪೂರೈಸುವಂತೆ ಆಗ್ರಹ

02
Published on

ಚಿಕ್ಕೋಡಿ: ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಿಗೆ ಕನಿಷ್ಠ 7 ಗಂಟೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ತಹಸೀಲ್ದಾರ್ ಚಿದಂಬರ ಕುಲಕರ್ಣಿಗೆ ಗುರುವಾರ ಮನವಿ ಸಲ್ಲಿಸಲಾಯಿತು.

ಅಂಕಲಿ, ಸಿದ್ದಾಪೂರವಾಡಿ, ಯಡೂರ, ಯಡೂರವಾಡಿ, ಚಂದೂರ, ಚಂದೂರಬೇಕ್, ಮಾಂಜರಿ, ಇಂಗಳ, ಖೋತವಾಡಿ, ಕಲ್ಲೋಳ, ಯಕ್ಸಂಬಾ ಮತ್ತು ರಾಯಬಾಗ ತಾಲೂಕಿನ ನಸಲಾಪೂರ. ಸೌಂದತ್ತಿ, ದಿಗ್ಗೇವಾಡಿ, ಹಳೆ-ದಿಗ್ಗೇವಾಡಿ, ಜಲಾಲಪೂರ, ಭಿರಡಿ, ಚಿಂಚಲ ಸೇರಿ ವಿವಿಧ ನದಿ ತೀರದ ಗ್ರಾಮಗಳಲ್ಲಿ ಜನಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ. ಆದ್ದರಿಂದ ಸಮರ್ಪಕವಾಗಿ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.

ಮೋಟರ್ ಪಂಪ್‌ಸೆಟ್‌ಗಳಿಗೆ ಪ್ರತಿದಿನ ಕನಿಷ್ಠ 7 ಗಂಟೆ ವಿದ್ಯುತ್ ಪೂರೈಸುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಇಲ್ಲದಿದ್ದಲ್ಲಿ ಮೇ 13ರಂದು ಅಂಕಲಿ ಗ್ರಾಮದಲ್ಲಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.

ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ನಿರ್ದೇಶಕರಾದ ಮಹಾಂತೇಶ ಕವಟಗಿಮಠ, ಭರತೇಶ ಬನವಣೆ, ಅಜೀತ ದೇಸಾಯಿ, ಸಂಜಯಗೌಡ ಪಾಟೀಲ, ಸುರೇಶ ಪಾಟೀಲ, ಮಹೇಶ ಭಾತೆ, ಮಾರುತಿ ಗುರುನಾಥ, ಮಹಾಂತೇಶ ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net