

ರಾಯಚೂರು: ಜಿಲ್ಲೆಯಲ್ಲಿ ಏಮ್ಸ್ ಸ್ಥಾಪನೆಗಾಗಿ ಹೋರಾಟಕ್ಕೆ ಕಲಬುರ ಮತ್ತು ಯಾದಗಿರಿ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಪದಾಕಾರಿಗಳು ಶನಿವಾರ ಜಿಲ್ಲಾ ಕ್ರೀಡಾಂಗಣದ ಬಳಿ ನಡೆಯುತ್ತಿರುವ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾಹಿತಿ ಪ್ರೊ.ಆರ್.ಕೆ.ಹುಡಗಿ ಮಾತನಾಡಿ, ಏಮ್ಸ್‌ಗಾಗಿ ನಡೆಸಲಾಗುತ್ತಿರುವ ಸುದೀರ್ಘ 450 ದಿನಗಳ ಹೋರಾಟ ಕಲ್ಯಾಣ ಕರ್ನಾಟಕ ಮಾತ್ರವಲ್ಲ ರಾಜ್ಯದಲ್ಲಿಯೇ ಇತಿಹಾಸ ನಿರ್ಮಿಸಿದ ಹೋರಾಟವಾಗಿದೆ. ಬದ್ಧತೆ, ಹಠ, ಛಲದಿಂದ ನಡೆಯುತ್ತಿರುವ ಹೋರಾಟಕ್ಕೆ ಕಲ್ಯಾಣ ಕರ್ನಾಟಕದ ಜನರು ಬೆಂಬಲಕ್ಕಿದ್ದಾರೆ.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕಲ್ಯಾಣ ಕರ್ನಾಟಕದ ಎಲ್ಲ ಜಿಲ್ಲೆಗಳು ಬೆಂಬಲ ನೀಡುತ್ತಿದ್ದು, ಇದು ಕೇವಲ ರಾಯಚೂರಿನ ಬೇಡಿಕೆಯಲ್ಲ ಕಲ್ಯಾಣ ಕರ್ನಾಟಕದ ಜನರ ಬೇಡಿಕೆ ಎಂದು ಜನಪ್ರತಿನಿಗಳು ಅರಿತುಕೊಂಡು ಕೂಡಲೇ ಕೇಂದ್ರ ಸರ್ಕಾರಕ್ಕೆ ಸಿಎಂ ನೇತೃತ್ವದಲ್ಲಿ ನಿಯೋಗ ತೆರಳಿ ಮನವಿ ಸಲ್ಲಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಲಬುರಗಿಯ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿ, ರಾಯಚೂರು ಜಿಲ್ಲೆ ಅಭಿವೃದ್ಧಿಯಿಂದ ಹಿಂದುಳಿದಿದ್ದು, ನಂಜುಂಡಪ್ಪ ವರದಿ ಶಿಾರಸ್ಸಿನಂತೆ ರಾಯಚೂರಿನಲ್ಲಿ ಐಐಟಿ ಸ್ಥಾಪನೆಯಾಗಬೇಕಾಗಿತ್ತು. ಆದರೆ ಕಿತ್ತೂರು ಕರ್ನಾಟಕಕ್ಕೆ ತೆಗೆದುಕೊಂಡು ಹೋಗಲಾಯಿತು. ಯಾವುದೇ ಕಾರಣಕ್ಕೂ ರಾಯಚೂರಿಗೆ ಏಮ್ಸ್ ತಪ್ಪಲು ಕೈಬಿಡುವುದಿಲ್ಲ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಯಾದಗಿರಿಯ ವೈಜನಾಥ ಪಾಟೀಲ್, ಏಮ್ಸ್ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಡಾ.ಬಸವರಾಜ ಕಳಸ, ಪದಾಕಾರಿಗಳಾದ ಅಶೋಕಕುಮಾರ ಜೈನ್, ಜಾನ್‌ವೆಸ್ಲಿ, ಡಾ.ಬಾಬುರಾವ್ ಶೇಗುಣಸಿ, ಡಾ.ಎಸ್.ಎಸ್.ಪಾಟೀಲ್, ವೀರಭದ್ರಪ್ಪ, ರುದ್ರಯ್ಯ ಗುಣಾರಿ, ಬಸವರಾಜ ಮಿಮಿಕ್ರಿ ಉಪಸ್ಥಿತರಿದ್ದರು.